Lesson List
ಶ್ರೀ ಲಲಿತಾ ಸಹಸ್ರನಾಮ
0/1
Lesson: Lesson
About Lesson

ಶ್ರೀ ಲಲಿತಾ ಸಹಸ್ರನಾಮ

ನ್ಯಾಸ :

(ನ್ಯಾಸವನ್ನು ಓದುವುದಕ್ಕೆ ಮುಂಚೆ ಶಾಂತವಾಗಿ ಕುಳಿತು ನಿಧಾನವಾಗಿ ಉಸಿರಾಡಿ ಮನಸ್ಸನ್ನು ಶುದ್ಧ ಮಾಡಿಕೊಂಡು ಏನಾದರೂ ಕೋರಿಕೆ ಇದ್ದರೆ ಕೋರಿಕೊಂಡು ಶುರುಮಾಡಬೇಕು, ಏಕೆಂದರೆ ಮನಸ್ಸಿನಲ್ಲಿ ಏನು ಚಿಂತೆ ಮತ್ತು ಆಲೋಚನೆ ಬರುತ್ತಿರುತ್ತದೋ ಅದಕ್ಕೆ ತಥಾಸ್ತು ಅನ್ನುತ್ತಾಳೆ .

ಓಂ ಅಸ್ಯ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಮಾಲಾಮಂತ್ರಸ್ಯI

ವಶಿನ್ಯಾದಿ ವಾಗ್ದೇವತಾ ಋಷಯಃI ಅನುಷ್ಟುಪ್ ಛಂದಃI

ಶ್ರೀ ಲಲಿತಾ ಪರಮೇಶ್ವರೀ ದೇವತಾI

ಶ್ರೀಮದ್ ವಾಗ್ಭವಕೂಟೇತಿ ಬೀಜಂI ಮಧ್ಯಕೂಟೇತಿ ಶಕ್ತಿಃI

ಶಕ್ತಿಕೂಟೇತಿ ಕೀಲಕಮ್I

ಶ್ರೀ ಲಲಿತಾಮಹಾತ್ರಿಪುರಸುಂದರೀ ಪ್ರಸಾದಸಿದ್ಧಿದ್ವಾರI

ಚಿಂತಿತ ಫಲವಾಪ್ತ್ಯರ್ಥೇ ಜಪೇ ವಿನಿಯೋಗಃ

ಓಂ ಅಥ ಲಮಿತ್ಯಾದಿ‌ ಪಂಚಪೂಜಾಂ ಕುರ್ಯಾತ್!

ಓಂ ಲಂ ಪೃಥಿವೀತತ್ವಾತ್ಮಿಕಾಯೈ ಶ್ರೀಲಲಿತಾ ದೇವೈ ಗಂಧಂ ಪರಿಕಲ್ಪಯಾಮಿ I

ಜಗನ್ಮಾತೆಗೆ ಇಡೀ ಭೂಮಿಯೇ ಗಂಧ.

ಓಂ ಹಂ ಆಕಾಶತತ್ವಾತ್ಮಿಕಾಯೈ ಶ್ರೀಲಲಿತಾ ದೇವೈ ಪುಷ್ಪಂ ಪರಿಕಲ್ಪಯಾಮಿ I

ಆಕಾಶದಿಂದ ನಕ್ಷತ್ರ ,ಸೂರ್ಯಚಂದ್ರರು ಸೇರಿ ಹೂವುಗಳಾಗಿ ತಾಯಿಯ ಪಾದಗಳಿಗೆ ಬೀಳುತ್ತಿದೆ

 

ಓಂ ಯಂ ವಾಯುತತ್ವಾತ್ಮಿಕಾಯೈ ಶ್ರೀಲಲಿತಾ ದೇವೈ ಧೂಪಂ ಪರಿಕಲ್ಪಯಾಮಿ I

ಎಲ್ಲಿ ಗಾಳಿ ಬೀಸುತ್ತಿದೆ ಅದೆಲ್ಲವೂ ಕೂಡ ದೂಪವಾಗುತ್ತದೆ.

ಓಂ ರಂ ಅಗ್ನಿತತ್ವಾತ್ಮಿಕಾಯೈ ಶ್ರೀಲಲಿತಾ ದೇವೈ ದೀಪಂ ಪರಿಕಲ್ಪಯಾಮಿ I

ಭೂಮಂಡಲದಲ್ಲಿ ಎಲ್ಲೆಲ್ಲಿ ಅಗ್ನಿ ಕಾಣಿಸುತ್ತಿದೆ ಅದೆಲ್ಲವೂ ಅವಳಿಗೆ ಆರತಿಯಾಗಿದೆ.

ಓಂ ವಂ ಅಮೃತತತ್ವಾತ್ಮಿಕಾಯೈ ಶ್ರೀಲಲಿತಾ ದೇವೈ ಅಮೃತನೈವೇದ್ಯಂಪರಿಕಲ್ಪಯಾಮಿ I

ಎಲ್ಲೆಲ್ಲಿ ಚರಾಚರ ವಸ್ತುಗಳಲ್ಲಿ ಜೀವ ,ಜಂತುಗಳು ಆಹಾರ ಸೇವನೆಯನ್ನು ಮಾಡುತ್ತಾ ಇದೆ ಅದೆಲ್ಲವೂ ಅವಳಿಗೆ ಸೇರಿದ್ದು.

ಧ್ಯಾನಂ

ಓಂ ಸಿಂದೂರಾರುಣವಿಗ್ರಹಾಂ ತ್ರಿನಯನಾಂ ಮಾಣಿಕ್ಯಮೌಲೀಸ್ಪುರತ್ I

ತಾರಾನಾಯಕಶೇಖರಾಂ ಸ್ಮಿತಮುಖೀಂ ಆಪೀನವಕ್ಷೋರುಹಾಮ್ I

ಪಾಣಿಭ್ಯಾಮಲಿಪೂರ್ಣರತ್ನಚಷಕಂ ರಕ್ತೋತ್ಫಲಂ ಬಿಭ್ರತೀಂ I

ಸೌಮ್ಯಾಂ ರತ್ನಘಟಸ್ತರಕ್ತಚರಣಾಂ ಧ್ಯಾಯೇತ್ ಪರಾಮಂಬಿಕಾಮ್ II

ಧ್ಯಾಯೇತ್ ಪರಾಮಂಬಿಕಾಮ್ II ಧ್ಯಾಯೇತ್ ಪರಾಮಂಬಿಕಾಮ್ II

ಅರ್ಥ:

ಧ್ಯಾನ ಶ್ಲೋಕದಲ್ಲಿ ತಾಯಿಯನ್ನು ಹೃದಯದಲ್ಲಿ

ಪರಿಕಲ್ಪನೆ ಮಾಡಿಕೊಳ್ಳುತ್ತಿದ್ದೇನಿ.

  • ಓಂ ಸಿಂದೂರಾರುಣವಿಗ್ರಹಾಂ

ಜಗನ್ಮಾತೆ ಆನಂದವಾಗಿ ಕೆಂಪು ಅಂಚಿನ ಗಿಣಿ ಬಣ್ಣದ ರೇಷ್ಮೆಯ ಸೀರೆಯನ್ನ ಉಟ್ಟು ಪೂರ್ಣ ಅಲಂಕೃತವಾಗಿ ಕುಳಿತ್ತಿದ್ದಾಳೆ .

  • ತ್ರಿನಯನಾಂ

ತಾಯಿ 3 ಕಣ್ಣುಗಳು ಹೊಂದಿದ್ದಾಳೆ.

  • ಮಾಣಿಕ್ಯಮೌಲೀಸ್ಪುರತ್

ಮಾಣಿಕ್ಯ ಮುಕುಟದಲ್ಲಿ ಪ್ರಕಾಶಿಸುತ್ತಿದ್ದಾಳೆ.

  • ತಾರಾನಾಯಕಶೇಖರಾಂ

ಚಂದ್ರನನ್ನು ತನ್ನ ತಲೆಯಲ್ಲಿ ಚೂಡಾಮಣಿ ಯಾಗಿ ಹೊಂದಿದ್ದಾಳೆ.

  • ಸ್ಮಿತಮುಖೀಂ

ಹಸನ್ಮುಖಿ ಯಾಗಿ ಕುಳಿತಿದ್ದಾಳೆ.

  • ಆಪೀನವಕ್ಷೋರುಹಾಮ್

ಪಿನೋಪದಾರಿಯಾಗಿ ಕುಳಿತಿದ್ದಾಳೆ.

  • ಪಾಣಿಭ್ಯಾಮಲಿಪೂರ್ಣರತ್ನಚಷಕಂ ರಕ್ತೋತ್ಫಲಂ ಬಿಭ್ರತೀಂ

ತನ್ನ 2 ಕೈಗಳಲ್ಲಿ(Hands) ರಕ್ತ ವರ್ಣದ ಕಮಲ(Lotus) ಮತ್ತು ಮಧ್ಯ ತುಂಬಿರುವ ರತ್ನ ಪಾತ್ರೆಯನ್ನು ಹಿಡಿದಿದ್ದಾಳೆ.

  • ಸೌಮ್ಯಾಂ

ಅತ್ಯಂತ ಸೌಮ್ಯವಾಗಿ ಕಾಣಿಸುತ್ತಿದ್ದಾಳೆ.

  • ರತ್ನಘಟಸ್ತರಕ್ತಚರಣಾಂ

ರತ್ನ ಘಟ್ಟದ ಮೇಲೆ ರಕ್ತವರ್ಣದ ಚರಣಗಳನ್ನು ಇಟ್ಟಿದ್ದಾಳೆ.

 

ಶ್ಲೋಕ 1 to 21 ತಾಯಿಯ ವರ್ಣನೆ ಮಾಡುತ್ತಿದ್ದಾರೆ . (ಕಿರೀಟದಿಂದ ಹಿಡಿದು ಕಾಲ್ಬೆರಳಿನ ಉಗುರುಗಳ ವರೆಗೂ.)

ಶ್ರೀ ಮಾತಾ ಶ್ರೀ ಮಹಾರಾಜ್ಞೀ ಶ್ರೀಮತ್ ಸಿಂಹಾಸನೇಶ್ವರೀ I

ಚಿದಗ್ನಿಕುಂಡ-ಸಂಭೂತ ದೇವಕಾರ್ಯ ಸಮುದ್ಯತಾ II1II

  • ಶ್ರೀ ಮಾತಾ ಅವಳು ಇಡಿ ಜಗತ್ತಿಗೆ ತಾಯಿ.

  • ಶ್ರೀ ಮಹಾರಾಙ್ಞೀ ಮಹಾದೇವನ ಈಶ್ವರನ ರಾಙ್ಞೀಯಾದ ಆಜಗನ್ಮಾತೆ ಮಹಾರಾಙ್ಞೀ .

(or)

 

ಅವಳು ಇಡೀ ಬ್ರಹ್ಮಾಂಡದ ಮಹಾನ್ ಸಾಮ್ರಾಜ್ಞಿ.

  • ಶ್ರೀಮತ್-ಸಿಂಹಾಸನೇಶ್ವರೀ – ಶ್ರೀ ಮಹಾರಾಙ್ಞೀ ಅತ್ಯಂತ ಅದ್ಭುತವಾದ ಸಿಂಹಾಸನದ (ಹೃದಯ) ಮೇಲೆ ಕುಳಿತಿದ್ದಾಳೆ.

  • ಚಿದಗ್ನಿಕುಂಡ-ಸಂಭೂತ – ತಾಯಿ ಚಿದಗ್ನಿ ಕುಂಡದಲ್ಲಿ (ಆಂತರ್ಯದ ಹೃದಯ) ಆವಿರ್ಭವಿಸಿದ್ದಾಳೆ.

  • ದೇವಕಾರ್ಯ ಸಮುದ್ಯತಾ – ಅವಳು ದೇವತಾ ಕಾರ್ಯ ಕೋಸ್ಕರವಾಗಿ ಆವಿರ್ಭವಿಸಿದ್ದಾಳೆ.

 

*************************************

ಉದ್ಯದ್ಬಾನು-ಸಹಸ್ರಾಭಾ ಚತುರ್ಬಾಹು-ಸಮನ್ವಿತಾ I

ರಾಗಸ್ವರೂಪ-ಪಾಶಾಢ್ಯಾ ಕ್ರೋಧಾಕಾರಾಂಕುಶೋಜ್ವಲಾ II2I

  1. ಉದ್ಯದ್ಬಾನು-ಸಹಸ್ರಾಭಾ – ಅವಳ ಕಾಂತಿ ಹೇಗಿದೆ ಅಂದರೆ, ಸಾವಿರ ಉದಯಿಸುತ್ತಿರುವ ಸೂರ್ಯನ ಕಾಂತಿ ಹೇಗಿರುತ್ತೋ, ಆಗಿದೆ.

  2. ಚತುರ್ಬಾಹು-ಸಮನ್ವಿತಾ – ಅವಳು 4 ಕೈಗಳನ್ನು (Hands ) ಹೊಂದಿದ್ದಾಳೆ

  3. ರಾಗಸ್ವರೂಪ-ಪಾಶಾಢ್ಯಾ – ಅವಳ ಎಡಗೈಯಲ್ಲಿ (Left hand) ರಾಗಾ ಎನ್ನುವಂತಹ ಪ್ರೀತಿಯ ಪಾಶವನ್ನು ಹಿಡಿದುಕೊಂಡಿದ್ದಾಳೆ.

  4. ಕ್ರೋಧಾಕಾರಾಂಕುಶೋಜ್ವಲಾ – ತನ್ನ ಬಲಗೈಯಲ್ಲಿ (Right hand)ಕ್ರೋದ ( anger), ವಿಷಯ ಜ್ಞಾನಗಳನ್ನೆಲ್ಲಾ ಅಂಕುಶ ವಾಗಿ ಇಟ್ಟುಕೊಂಡಿದ್ದಾಳೆ.

*************************************

ಮನೋರೂಪೇಕ್ಷು ಕೋದಂಡಾ ಪಂಚತನ್ಮಾತ್ರಸಾಯಕಾ I

ನಿಜಾರುಣಪ್ರಭಾಪೂರಾ ಮಜ್ಜದ್ಬ್ರಹ್ಮಾಂಡಮಂಡಲಾ II3II

  1. ಮನೋರೂಪೇಕ್ಷುಕೋದಂಡಾ – ಅವಳ ಮನಸ್ಸನ್ನು(mind) ಪ್ರತಿನಿಧಿಸುವ ಕಬ್ಬಿನಜಿಲ್ಲೆ(Sugarcane) ಕೈಯಲ್ಲಿ ಹಿಡಿದುಕೊಂಡಿದ್ದಾಳೆ.

  2. ಪಂಚತನ್ಮಾತ್ರಸಾಯಕಾ – ಅವಳು 5 ಸೂಕ್ಷ್ಮ ಅಂಶಗಳನ್ನು (ಸ್ಪರ್ಶ, ವಾಸನೆ, ಶ್ರವಣ, ರುಚಿ ಮತ್ತು ದೃಷ್ಟಿ) ಬಾಣಗಳಾಗಿ ಹೊಂದಿದ್ದಾಳೆ.

  3. ನಿಜಾರುಣಪ್ರಭಾಪೂರಾಮಜ್ಜದ್ಬ್ರಹ್ಮಾಂಡಮಂಡಲಾ – ಅವಳ ತೇಜಸ್ಸು ಪೂರ್ಣ ಬ್ರಹ್ಮಾಂಡ ಗಳನ್ನೇ ಬೆಳಗುತ್ತಿದೆ .

*************************************

ಚಂಪಕಾಶೋಕ-ಪುನ್ನಾಗ-ಸೌಗಂಧಿಕ- ಲಸತ್ಕಚಾ I

ಕುರುವಿಂದ ಮಣಿ-ಶ್ರೇಣಿಕನತ್ಕೋಟೀರ ಮಂಡಿತಾ II4II

  1. ಚಂಪಕಾಶೋಕ-ಪುನ್ನಾಗ-ಸೌಗಂಧಿಕ- ಲಸತ್ಕಚಾ – ಅವಳ ಕೂದಲನ್ನು(Hair) ಚಂಪಕಾ, ಅಶೋಕ, ಪುನ್ನಾಗ ಮತ್ತು ಸೌಗಂಧಿಕಾ ಮುಂತಾದ ಹೂವುಗಳಿಂದ (flowers) ಅಲಂಕರಿಸಲಾಗಿದೆ,ಅದರಿಂದ ಪರಿಮಳ ಬರುತ್ತಿದೆ.

  2. ಕುರುವಿಂದ ಮಣಿ-ಶ್ರೇಣಿಕನತ್ಕೋಟೀರ ಮಂಡಿತಾ – ಜಗನ್ಮಾತೆ ಕುರುವಿಂದ ರತ್ನಗಳಿಂದ ಕೂಡಿರುವಂತಹ ಕಿರೀಟನ್ನು ಆಕೆ ತೊಡಗಿದ್ದಾಳೆ.

*************************************

ಅಷ್ಟಮೀಚಂದ್ರ-ವಿಭ್ರಾಜದಲಿಕಸ್ಥಲ-ಶೋಭಿತಾ I

ಮುಖಚಂದ್ರ-ಕಲಂಕಾಭ ಮೃಗನಾಭಿ ವಿಶೇಷಕಾ II5II

  1. ಅಷ್ಟಮೀಚಂದ್ರ ವಿಭ್ರಾಜದಲಿಕಸ್ಥಲ ಶೋಭಿತಾ – ಜಗನ್ಮಾತೆಯ ಮುಖ (Face) ಅಷ್ಟಮಿಯ ಚಂದ್ರನಂತೆ ಶೋಭಿಸುತ್ತದೆ.

  2. ಮುಖಚಂದ್ರ ಕಲಂಕಾಭ ಮೃಗನಾಭಿ ವಿಶೇಷಕಾ – ಚಂದ್ರನ ಕಾಂತಿಯಂತೆ ಹೊಳೆಯುವ ಜಗನ್ಮಾತೆಯ ಮುಖದಲ್ಲಿ ಕಸ್ತೂರಿ ತಿಲಕ ಕಲಂಕ ವೇನೋ ಅನಿಸುತ್ತಿದೆ

 

*************************************

ವದನಸ್ಮರ-ಮಾಂಗಲ್ಯ-ಗೃಹತೋರಣಚಿಲ್ಲಿಕಾ I

ವಕ್ತ್ರಲಕ್ಷ್ಮೀ-ಪರೀವಾಹ-ಚಲನ್ಮೀನಾಭ-ಲೋಚನ II6II

ವದನಸ್ಮರ-ಮಾಂಗಲ್ಯ-ಗೃಹತೋರಣಚಿಲ್ಲಿಕಾ I

  1. ವದನಸ್ಮರ-ಮಾಂಗಲ್ಯ-ಗೃಹತೋರಣಚಿಲ್ಲಿಕಾ – ಅವಳ ಉಬ್ಬುಗಳು`ಹೇಗೆ ಕಾಣಿಸ್ತಾ ಇದೆ ಅಂದರೆ ,ಒಂದು ಒಳ್ಳೆಯ ಗೃಹಕ್ಕೆ ಶೋಭಾಯಮಾನವಾಗಿ ತೋರಣಗಳನ್ನು ಕಟ್ಟಿರುವವಂತಿದೆ .

  2. ವಕ್ತ್ರಲಕ್ಷ್ಮೀ-ಪರೀವಾಹ-ಚಲನ್ಮೀನಾಭ-ಲೋಚನ – ಜಲ ಪ್ರವಾಹದಲ್ಲಿ ಮೀನುಗಳು ಹೇಗೆ ಓಡಾಡುತ್ತಿದೆಯೋ, ಅವಳಕಣ್ಣುಗಳು (Eyes)ಮೀನಿನಂತೆ (fish)ಆ ಕಡೆ ಈ ಕಡೆ ನೋಡುತ್ತಾ ಇರುತ್ತದೆ.

*************************************

ನವಚಂಪಕ-ಪುಷ್ಪಾಭ-ನಾಸಾದಂಡ- ವಿರಾಜಿತಾ I

ತಾರಾಕಾಂತಿ-ತಿರಸ್ಕಾರಿ-ನಾಸಾಭರಣ- ಭಾಸುರ II7II

  1. ನವಚಂಪಕ-ಪುಷ್ಪಾಭ-ನಾಸಾದಂಡ – ವಿರಾಜಿತಾ – ಆಕೆಯ ಮೂಗು (Nose) ಹೊಸದಾಗಿ ಅರಳಿರುವಂತ ಸಂಪಿಗೆ ಹೂವಿನ ಹಾಗಿ ಇದೆ.

  2. ತಾರಾಕಾಂತಿ-ತಿರಸ್ಕಾರಿ-ನಾಸಾಭರಣ- ಭಾಸುರ – ಅವಳ ಮೂಗಿನ ಆಭರಣ (Nose ring) ನಕ್ಷತ್ರಗಳ ಕಾಂತಿಯನ್ನು ತಿರಸ್ಕಾರ ಮಾಡುವ ಹಾಗೆ ಬೆಳಗುತ್ತಿದೆ.

*************************************

ಕದಂಬಮಂಜರೀ-ಕ್ಲೃಪ್ತ-ಕರ್ಣಪೂರ-ಮನೋಹರಾ I

ತಾಟಂಕ-ಯುಗಲೀ-ಭೂತ-ತಪನೋಡುಪ-ಮಂಡಲಾ II8II

  1. ಕದಂಬಮಂಜರೀ-ಕ್ಲೃಪ್ತ-ಕರ್ಣಪೂರ-ಮನೋಹರಾ – ತಾಯಿಯ ಕಿವಿಯ (Ears) ಮೇಲ್ಭಾಗದಲ್ಲಿ ಅಲಂಕರಿಸಿದ ಕದಂಬ ಪುಷ್ಪಗಳ ಗುಚ್ಚುಗಳಿಂದ ರಮಣೀಯ ವಾಗಿದೆ.

  2. ತಾಟಂಕ-ಯುಗಲೀ-ಭೂತ-ತಪನೋಡುಪ-ಮಂಡಲಾ – ಕಿವಿಯ ಆಭರಣಗಳು ಸೂರ್ಯ ಚಂದ್ರ ನಂತೆ ತೇಜೋಮಯ ವಾಗಿ ಶೋಭಿಸುತ್ತಿದೆ.

*************************************

ಪದ್ಮರಾಗಶಿಲಾದರ್ಶ-ಪರಿಭಾವಿ-ಕಪೋಲಭೂಃ I

ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ II9II

1.ಪದ್ಮರಾಗಶಿಲಾದರ್ಶ-ಪರಿಭಾವಿ-ಕಪೋಲಭೂಃ – ಪದ್ಮರಾಗ ಶಿಲೆಗಳನ್ನೇ (ಕನ್ನಡಿಯಂತಹ ) ತಿರಸ್ಕರಿಸುವಂತೆ , ಅವಳ ಕೆನ್ನೆಗಳು(Cheeks)

ಹೊಳೆಯುತ್ತದೆ.

2.ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ – ಮಾತೆಯ ತುಟಿಗಳು ಪಕ್ವವಾದ ಹೊಸದಾಗಿ ಹವಳದಂತೆ ಇದೆ .

*************************************

ಶುದ್ಧ ವಿದ್ಯಾಂಕುರಾಕಾರ ದ್ವಿಜಪಂಕ್ತಿ ದ್ವಯೋಜ್ಜ್ವಲಾ |

ಕರ್ಪೂರವೀಟಿ ಕಾಮೋದ ಸಮಾಕರ್ಷ ದ್ದಿಗಂತರಾ || 10 ||

1.ಶುದ್ಧ ವಿದ್ಯಾಂಕುರಾಕಾರ ದ್ವಿಜಪಂಕ್ತಿ ದ್ವಯೋಜ್ಜ್ವಲಾ ಆಕೆಯ ದಂತ (Teeth) ಪಂಕ್ತಿಗಳು ಶುದ್ಧ ವಿದ್ಯೆಯಂತೆ ಉಜ್ಜ್ವಲವಾಗಿದೆ.

2.ಕರ್ಪೂರವೀಟಿ ಕಾಮೋದ ಸಮಾಕರ್ಷ ದ್ದಿಗಂತರಾ ತಾಂಬೂಲದ ಪರಿಮಳ ದಿಗಂತವನ್ನು ಹರಡಿದೆ.

*************************************

ನಿಜಸಲ್ಲಾಪ ಮಾಧುರ್ಯ ವಿನಿರ್ಭರ್-ತ್ಸಿತ ಕಚ್ಛಪೀ |

ಮಂದಸ್ಮಿತ ಪ್ರಭಾಪೂರ ಮಜ್ಜತ್-ಕಾಮೇಶ ಮಾನಸಾ || 11 ||

1.ನಿಜಸಲ್ಲಾಪ ಮಾಧುರ್ಯ ವಿನಿರ್ಭರ್-ತ್ಸಿತ ಕಚ್ಛಪೀ ಕಚ್ಛಪೀ ಎಂದು ತಿಳಿದಿರುವ ಸರಸ್ವತಿಯ ವೀಣೆಯ ನಾದಕ್ಕಿಂತ ಅವಳ ಮಾತು (Speech) ಹೆಚ್ಚು ಮಧುರವಾಗಿದೆ.

2.ಮಂದಸ್ಮಿತ ಪ್ರಭಾಪೂರ ಮಜ್ಜತ್ – ಕಾಮೇಶ ಮಾನಸಾ ಮಾತೆಯ ಸದಾಕಾಲ ಹಸನ್ಮುಖ ಭಾವ, ಮಂದಹಾಸದ ಲಾವಣ್ಯ ಪ್ರಹರದಲ್ಲಿ ರಾಮೇಶ್ವರ ಮುಳಗಿ ಹೋಗುತ್ತಾನೆ .

*************************************

ಅನಾಕಲಿತ-ಸಾದೃಶ್ಯ-ಚುಬುಕಶ್ರೀ-ವಿರಾಜಿತಾ I

ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರಶೋಭಿತ-ಕಂದರಾ II12II

1.ಅನಾಕಲಿತ-ಸಾದೃಶ್ಯ-ಚುಬುಕಶ್ರೀ-ವಿರಾಜಿತಾ – ಅವಳ ಅಸಾದೃಶ್ಯ ವಾದಂತ ಗಲ್ಲವೂ ( Chin) ಕೂಡ ಆನಂದಭರಿತವಾಗಿ ಕಾಣಿಸುತ್ತಿದೆ .

2.ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರಶೋಭಿತ-ಕಂದರಾ – ಕಾಮೇಶನಿಂದ ಕಟ್ಟಲ್ಪಟ್ಟ ಆ ಮಾಂಗಲ್ಯ(Mangalasutra) ಸೂತ್ರದಿಂದ ಆಕೆಯ ಕಂಠ ದಲ್ಲಿ(neck) ಶೋಭಿಸುತ್ತಿದೆ

*************************************

ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತಾ I

ರತ್ನಗ್ರೈವೇಯ-ಚಿಂತಾಕ-ಲೋಲ-ಮುಕ್ತಾ-ಫಲಾನ್ವಿತಾ II13II

1.ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತಾ – ಅವಳ ಸುಂದರವಾದ ತೋಳುಗಳನ್ನು (arms) ಚಿನ್ನದ ಕೇಯೂರ (ಕಡಗ) ಗಳಿಂದ ಅಲಂಕರಿಸಲಾಗಿದೆ.

2.ರತ್ನಗ್ರೈವೇಯ-ಚಿಂತಾಕ-ಲೋಲ-ಮುಕ್ತಾ- ಫಲಾನ್ವಿತಾ – ಜಗನ್ಮಾತೆಯ ಕೊರಳಲ್ಲಿ (Neck) 3 ಎಳೆ ಹಾರ –>ನವರತ್ನಗಳಿಂದ (Navarathna)

–> ಮುತ್ತು (pearls)

–> ಚಿಂತಾಕಂತ ಪದಕ (ದರ್ಶನದಿಂದ ಮೋಕ್ಷ ಸಿಗುತ್ತಿದೆ)

ರಾರಾಜಿಸ್ತಾಇದೆ .

*************************************

ಕಾಮೇಶ್ವರ-ಪ್ರೇಮರತ್ನ-ಮಣಿ-ಪ್ರತಿಪಣ-ಸ್ತನೀ I

ನಾಭ್ಯಾಲವಾಲ-ರೋಮಾಲಿ-ಲತಾ-ಫಲ-ಕುಚದ್ವಯೀ II14II

ಕಾಮೇಶ್ವರನ ಪ್ರೇಮದ ಪ್ರತಿಬಿಂಬವಾಗಿ, ಅರ್ಧನಾರೀಶ್ವರಳಾಗಿ ಆರಾಧಿಸಲು ಪಡುವ ನಾಭಿಯಿಂದ ಹುಟ್ಟಿದ ಬಳ್ಳಿಗೆ ಫಲಗಳಾಗಿ ಇಡೀ ಜಗತ್ತಿನ ಜೀವಜಂತುಗಳಿಗೆ ಆಹಾರದ ಪ್ರತಿಬಿಂಬವಾದ ಕುಚಗಳು .

*************************************

ಲಕ್ಷ್ಯರೋಮ-ಲತಾಧಾರತಾ-ಸಮುನ್ನೇಯ-ಮಧ್ಯಮಾ I

ಸ್ತನಭಾರ-ದಲನ್ಮಧ್ಯ-ಪಟ್ಟಬಂಧ-ವಲಿತ್ರಯಾ II15II

1.ಲಕ್ಷ್ಯರೋಮ-ಲತಾಧಾರತಾ-ಸಮುನ್ನೇಯ-ಮಧ್ಯಮಾ

ತಾಯಿಯ ನಾಭಿ ಪ್ರದೇಶದಲ್ಲಿ ಮುಂಗಾರು ಅಂತ ಬಳ್ಳಿಯಲ್ಲಿ ಅರಳುತ್ತಿದ್ದ ಅವಳ ವರ್ಣನೆ

ಆಕೆಯ ನಾಭಿಯಿಂದ (Navel) ಹುಟ್ಟಿ ಬಂದಿರುವ ಕಂತ ಒಂದು ರೋಮ ಲತೆಯಲ್ಲಿ ಕುಚದ್ವಯ ಗಳನ್ನ ಫಲವಾಗಿ ಉಳ್ಳುವಳಾಗಿ ಕಾಣ್ತಾ ಇದ್ದಾಳೆ ಮತ್ತು ರೋಮ ಲತೆಗೆ ಆಧಾರ ಕಟಿ ಪ್ರದೇಶ .

2.ಸ್ತನಭಾರ-ದಲನ್ಮಧ್ಯ-ಪಟ್ಟಬಂಧ-ವಲಿತ್ರಯಾ ಸ್ತನ ಭಾರದಿಂದ ಬಗ್ಗಿದ ಸ್ತನ ಪ್ರದೇಶಕ್ಕೆ ಕನಕ ಪಟ್ಟಿಯೇ ಆಧಾರವಾಗಿದೆ.

*************************************

ಅರುಣಾರುಣಕೌಸುಂಭ-ವಸ್ತ್ರ-ಭಾಸ್ವತ್ಕಟೀತಟೀ I

ರತ್ನ-ಕಿಂಕಿಣಿಕಾ-ರಮ್ಯ-ರಶನಾ-ದಾಮಭೂಶಿತಾ II16II

1.ಅರುಣಾರುಣಕೌಸುಂಭ-ವಸ್ತ್ರ-ಭಾಸ್ವತ್ಕಟೀತಟೀ ಅರುಣೋದಯದ ಸಮಯದಲ್ಲಿ ಪ್ರಜ್ವಲಿಸುವ ಕೇಸರಿ ಬಣ್ಣದಂತಹ ವಸ್ತ್ರ ಆಕೆಯ ಕಟಿ ಪ್ರದೇಶ ವನ್ನು ಶೋಭಿಸುತ್ತಿದೆ .

2.ರತ್ನ-ಕಿಂಕಿಣಿಕಾ-ರಮ್ಯ-ರಶನಾ-ದಾಮಭೂಶಿತಾ ರತ್ನ ಮಯವಾದಂತ ಕಿರುಗೆಜ್ಜೆ ಗಳಿಂದ ಕೂಡಿರುವಂತಹ ಒಂದು ಡಾಬನ್ನು (Belt) ಸೊಂಟಕ್ಕೆ (Waist)ಸೇರಿಸಿದ್ದಾಳೆ ಆ ಸೀರೆಯ ಮೇಲೆ, ಅತ್ಯಂತ ಭೂಷಿತವಾಗಿ ಕಾಣಿಸುತ್ತಿದೆ.

*************************************

ಕಾಮೇಶ-ಜ್ಞಾತ-ಸೌಭಾಗ್ಯ-ಮಾರ್ದವೋರು-ದ್ವಯಾನ್ವಿತಾ I

ಮಾಣಿಕ್ಯ-ಮಕುಟಾಕಾರ-ಜಾನುದ್ವಯ-ವಿರಾಜಿತಾ II17II

1.ಕಾಮೇಶ-ಜ್ಞಾತ-ಸೌಭಾಗ್ಯ-ಮಾರ್ದವೋರು-ದ್ವಯಾನ್ವಿತಾ ಅವಳ ತೊಡೆಯ(Thighs) ಸೌಂದರ್ಯವು ಈಶ್ವರನಿಗೆ ಮಾತ್ರ ಗೋಚರವಾಗಿದೆ (Visible).

2.ಮಾಣಿಕ್ಯ-ಮಕುಟಾಕಾರ-ಜಾನುದ್ವಯ-ವಿರಾಜಿತಾ ಆಕೆಯ ಮಾಣಿಕ್ಯದ ಮುಕುಟದಂತೆ ಮೊಣಕಾಲುಗಳು (Knees) ವಿರಾಜಿಸುತ್ತಾಇದೆ .

*************************************

ಇಂದ್ರಗೋಪ-ಪರಿಕ್ಷಿಪ್ತಸ್ಮರತೂಣಾಭ-ಜಂಘಿಕಾ I

ಗೂಢಗುಲ್ಫಾ ಕೂರ್ಮಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ II18II

1.ಇಂದ್ರಗೋಪ-ಪರಿಕ್ಷಿಪ್ತಸ್ಮರತೂಣಾಭ-ಜಂಘಿಕಾ ಇಂದ್ರಗೋಪದ (ಅತ್ಯಂತ ಕೆಂಪು ಬಣ್ಣ ಇರುವ ಒಂದು ಹುಳು ) ಹುಳುವಿನ ಛಾಯೆ ಆಕೆಯ ಮೊಣಕಾಲು ಹಾಗೆ ಕಾಣಿಸುತ್ತಾ ಇದೆ

2.ಗೂಢಗುಲ್ಫಾ ಆಕೆಯ ಪಾದಗಳು(Feet) ಕಾಣಿಸದಂತೆ ಸೀರೆಯ ನೆರಿಗೆಯನ್ನು ಹುಟ್ಟಿದ್ದಾಳೆ.

3.ಕೂರ್ಮಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ – ಆಮೆಯ ಬೆನ್ನಿನ ಚಿಪ್ಪಿನಂತೆ ಆಕೆಯ ಪಾದದ ಮೇಲ್ಭಾಗ ಗೋಲಾಕಾರವಾಗಿ ಕಾಣಿಸುತ್ತಿದೆ .

*************************************

ನಖ-ದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ I

ಪದದ್ವಯ-ಪ್ರಭಾಜಾಲ-ಪರಾಕೃತ-ಸರೋರುಹಾ II19II

1.ನಖ-ದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ – ನಖ(ಕಾಲು ಬೆರಳಿನ ಉಗುರುಗಳು ). ಯಾರು ಅವಳ ಪಾದಗಳಿಗೆ ನಮಸ್ಕರಿಸುತ್ತಾರೋ, ಅವರ ತಮೋಗುಣ ನಾಶಮಾಡುವಂತ ನಖ ಕಿರಣಗಳಿಂದ ಕೂಡಿದೆ.

2.ಪದದ್ವಯ-ಪ್ರಭಾಜಾಲ-ಪರಾಕೃತ-ಸರೋರುಹಾ – ಪಾದಗಳ ಕಾಂತಿ ಕಮಲದ ಕಾಂತಿಯನ್ನು ತಿರಸ್ಕರಿಸಿದಂತಿದೆ .

*************************************

ಶಿಂಜಾನ-ಮಣಿಮಂಜೀರ-ಮಂಡಿತ-ಶ್ರೀ-ಪದಾಂಬುಜಾ I

ಮರಾಲೀ-ಮಂದಗಮನಾ-ಮಹಾಲಾವಣ್ಯ-ಶೇವಧಿಃ II20II

1.ಶಿಂಜಾನ-ಮಣಿಮಂಜೀರ-ಮಂಡಿತ-ಶ್ರೀ-ಪದಾಂಬುಜಾ – ಅವಳ ಕಮಲದ ಪಾದಗಳಲ್ಲಿ, ಕಾಲ್ಲಗೆಜ್ಜೆ ಜಣಜಣಾಂತ ಕಾಣಿಸುತ್ತಿದೆ.

2.ಮರಾಲೀ-ಮಂದಗಮನಾ-

ಅವಳ ಲಾವಣ್ಯ ಹಂಸದಂತೆ ಮಂದಗತಿಯಲ್ಲಿ ನಡೆದು ಬರುತ್ತಿದ್ದಾಳೆ, ಲಾವಣ್ಯ ಶೇವಧಿಃ ಯಂತೆ ಕಾಣಿಸುತ್ತಿದ್ದಾಳೆ.

*************************************

ಬಾಹ್ಯರೂಪ ವರ್ಣನೆ

ಸರ್ವಾರುಣಾsನವದ್ಯಾಂಗೀ- ಸರ್ವಾಭರಣ-ಭೂಷಿತಾ I

ಶಿವ-ಕಾಮೇಶ್ವರಾಂಕಸ್ಥಾ ಶಿವಾಸ್ವಾಧಿನ-ವಲ್ಲಭಾ II21II

1.ಸರ್ವಾರುಣಾ – ಎಲ್ಲವೂ ಅರುಣ ಮಯವಾಗಿದೆ (ಆಭರಣ, ಕುಸುಮ, ಕಾಂತಿ ಎಲ್ಲವೂ ಕೆಂಪು ಛಾಯೆಯಿಂದ ಕೂಡಿರುವಂಥದ್ದು).

2.ನವದ್ಯಾಂಗೀ – ಅವಳ ಅಂಗಾಂಗಗಳು ದೋಷರಹಿತ .

3.ಸರ್ವಾಭರಣ-ಭೂಷಿತಾ – ಚೂಡಾಮಣಿ ಯಿಂದ ಕಾಲುಂಗುರ ದವರಿಗೆ40 ಅಭರಣಗಳನ್ನು ಧರಿಸಿದ್ದಾಳೆ.

4.ಶಿವ-ಕಾಮೇಶ್ವರಾಂಕಸ್ಥಾ – ಶಿವ ಕಾಮೇಶ್ವರನ ಅಂಕದಲ್ಲಿ( Lap) ಕುಳಿತಿರುವವಳು.

5.ಶಿವಾಸ್ವಾಧಿನ-ವಲ್ಲಭಾ – ಅವಳೇ ತನ್ನ ಆಧೀನನಂತಿರುವ ಕಾಮೇಶ್ವರನನ್ನು ವಲ್ಲಭನನ್ನಾಗಿ ಹೊಂದಿದ್ದಾಳೆ .

*************************************

ಸುಮೇರು-ಮಧ್ಯ-ಶೃಂಗಸ್ಥಾ- ಶ್ರೀಮನ್ನಗರ-ನಾಯಿಕಾ I

ಚಿಂತಾಮಣಿ-ಗೃಹಾಂತಸ್ಥಾ ಪಂಚ-ಬ್ರಹ್ಮಾಸನ-ಸ್ಥಿತಾ II22II

1.ಸುಮೇರು-ಮಧ್ಯ-ಶೃಂಗಸ್ಥಾ- ಶ್ರೀಮನ್ನಗರ-ನಾಯಿಕಾ –ಸುಮೇರು ಅಂತ ಒಂದು ಪರ್ವತ, ಆಪರ್ವತದ ಮಧ್ಯದಲ್ಲಿ 4th ಶಿಖರದ ತುತ್ತತುದಿಯಲ್ಲಿ ಇರುವವಳು, ಶ್ರೀಮನ್ ನಗರದ ನಾಯಕಿಯಾಗಿದ್ದಾಳೆ.

2.ಚಿಂತಾಮಣಿ-ಗೃಹಾಂತಸ್ಥಾ – ಚಿಂತಾಮಣಿಯಿಂದ ಕಟ್ಟಿರುವ ಮನೆಯಲ್ಲಿ(House) ವಾಸವಾಗಿದ್ದಾಳೆ.

3.ಪಂಚ-ಬ್ರಹ್ಮಾಸನ-ಸ್ಥಿತಾ – ಮಾತೆಯ ಕುಳಿತಿರುವ ಮಂಚ( Seat) 5 ಬ್ರಹ್ಮರು [ 1)ಬ್ರಹ್ಮ ,2)ಹರಿ 3) ರುದ್ರ 4)ಈಶ್ವರ ನಾಲಕ್ಕು ಕಾಲುಗಳು 5) ಶಿವನೇ ಹಲಿಗೆ (ಹಾಸಿಗೆ) ಆಗಿದ್ದಾನೆ].

*************************************

ಮಹಾಪದ್ಮಾಟವೀ-ಸಂಸ್ಥಾ ಕದಂಬವನ-ವಾಸಿನೀ I

ಸುಧಾಸಾಗರ-ಮಧ್ಯಸ್ಥಾ ಕಾಮಾಕ್ಷೀ ಕಾಮದಾಯಿನೀ II23II

1.ಮಹಾಪದ್ಮಾಟವೀ-ಸಂಸ್ಥಾ – ಆಕೆ ಮಹಾಪದ್ಮದಲ್ಲಿ(ಸಾವಿರ ದಳಗಳು ) ಇದ್ದಾಳೆ.

2.ಕದಂಬವನ-ವಾಸಿನೀಎತ್ತರವಾಗಿ ಬೆಳೆದಿರುವ ಕದಂಬ ವೃಕ್ಷಗಳ ಮಧ್ಯ ವಿಹಾರ ಸ್ಥಾನ.

3.ಸುಧಾಸಾಗರ-ಮಧ್ಯಸ್ಥಾ – ಅಮೃತ ಸಾಗರದ ಮಧ್ಯದಲ್ಲಿ ಕುಳಿತ್ತಿದ್ದಾಳೆ.

4.ಕಾಮಾಕ್ಷೀ – ಅವಳ ಕಣ್ಣುಗಳು (Eyes) ಕಮನೀಯವಾಗಿದೆ (graceful)

5.ಕಾಮದಾಯಿನೀ –ಅವಳು ನಮ್ಮ ಮನೋ ಕಾಮನೆಗಳನ್ನು ಈಡೇರಿಸುತ್ತಾಳೆ .

*************************************

ವಶಿನ್ ಯಾದಿ ವಾಕ್ ದೇವತಾ ಋಷಿಗಳು 24 ರಿಂದ 34 ಶ್ಲೋಕದವರಿಗೆ, ತಾಯಿಯ ಅವತಾರದ ಪ್ರಯೋಜನೆಗಳು ಏನು ಅಂತ ತಿಳಿಸುತ್ತಿದ್ದಾರ.

ದೇವರ್ಷಿ-ಗಣಸಂಘಾತ -ಸ್ತೂಯಮಾನಾತ್ಮವೈಭವ I

ಭಂಡಾಸುರ-ವಧೋದ್ಯುಕ್ತ- ಶಕ್ತಿಸೇನಾಸಮನ್ವಿತಾ II24II

1.ದೇವರ್ಷಿ-ಗಣಸಂಘಾತ-ಸ್ತೂಯಮಾನಾತ್ಮವೈಭವ -ದೇವರ್ಷಿ ಗಳ( sages)ಸಮುದಾಯದಿಂದ ಹೊಗಳಲ್ ಪಟ್ಟಿದ್ದಾಳೆ ,ಆಕೆಯ ಚೈತನ್ಯವೇ ಅವಳ ಆತ್ಮ ವೈಭವವನ್ನು ಹೊಗಳುತ್ತಿದ್ದಾರೆ.

2.ಭಂಡಾಸುರ-ವಧೋದ್ಯುಕ್ತ- ಶಕ್ತಿಸೇನಾಸಮನ್ವಿತಾ – ಭಂಡಾಸುರ ಎಂಬ ರಾಕ್ಷಸನನ್ನು ,ವಧಿಸಬೇಕೆಂದು ಶಕ್ತಿಗಳಿಂದ ಕೂಡಿಕೊಂಡು ತಾಯಿ ಹೊರಟಿದ್ದಾಳೆ.

*************************************

ಸಂಪತ್ಕರೀ-ಸಮಾರೂಢ-ಸಿಂಧುರ-ವ್ರಜ-ಸೇವಿತಾ I

ಅಶ್ವಾರೂಢಾಧಿಷ್ಠಿತಾಶ್ವ-ಕೋಟಿ-ಕೋಟಿಭಿರಾವೃತಾ II25II

1.ಸಂಪತ್ಕರೀ ಸಮಾರೂಢ-ಸಿಂಧುರ-ವ್ರಜ-ಸೇವಿತಾಆನೆಗಳ ಗುಂಪಿನ ನಾಯಕತ್ವ ವಹಿಸಿದ ಸಂಪತ್ ಕರಿ ದೇವಿಕೂಡ ಶ್ರೀ ಮಾತೆಯನ್ನು ಆರಾಧಿಸುತ್ತಾ ಯುದ್ಧದಲ್ಲಿ ಭಾಗವಹಿಸುತ್ತಾರೆ.

3.ಅಶ್ವಾರೂಢಾಧಿಷ್ಠಿತಾಶ್ವ ಕೋಟಿ-ಕೋಟಿಭಿರಾವೃತಾ- ಅಶ್ವರೂಢ (horse) ನಾಯಕತ್ವದಲ್ಲಿ ಕೋಟಿ ಕೋಟಿ ಅಶ್ವಗಳ ಮೇಲೆ ದೇವತೆಗಳ ಸಮೂಹದೊಂದಿಗೆ ತಾಯಿ ಬರುತ್ತಿದ್ದಾಳೆ.

*************************************

ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ I

ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾ II26II

1.ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾಚಕ್ರ ರಾಜ ಎಂಬರಥದಲ್ಲಿ(Chariot) ತಾಯಿ ಎಲ್ಲಾ ತರಹ ಆಯುದಗಳಿಂದ( ಶಸ್ತ್ರ ,ಅಸ್ತ್ರ ,ಯಂತ್ರ ,ಮಂತ್ರ )ತುಂಬಿ ಹೊರಟಿದ್ದಾಳೆ.

2.ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾಗೇಯಚಕ್ರ ಎಂಬರಥದಲ್ಲಿ(Chariot) ಶಾಮಲಾಂಬ ಮಂತ್ರಿಯು ಹೊರಟಿದ್ದಾಳೆ.

*************************************

ಕಿರಿಚಕ್ರ-ರಥಾರೂಢ-ದಂಡನಾಥಾ-ಪುರಸ್ಕೃತಾ I

ಜ್ವಾಲಾ-ಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ II27II

1.ಕಿರಿಚಕ್ರ-ರಥಾರೂಢ-ದಂಡನಾಥಾ-ಪುರಸ್ಕೃತಾ – ಕಿರಿ(ಕಿರಣಗಳು) ಕಿರಿ ಚಕ್ರ ಎಂಬರಥದಲ್ಲಿ(Chariot) ವಾರಾಹಿ ದೇವಿ ದಂಡನಾಥೆ ಯಾಗಿ (ಸೇನಾದಿಪತಿ) ಬರುತ್ತಿದ್ದಾಳೆ. (ವಾರಾಹಿ ದೇವಿ ಯಾವದಕ್ಕೂ ವಶವಾಗುವುದಿಲ್ಲ )

2.ಜ್ವಾಲಾ-ಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ – ಜ್ವಾಲಾ ಮಾಲಿನಿ ದೇವತೆ ತಾಯಿಯ ಮತ್ತು ಸೈನ್ಯದ ಸುತ್ತಲೂ ಅಗ್ನಿ ವಲಯ (fort of fire) ವನ್ನು ಸೃಷ್ಟಿಸಿದ್ದಾಳೆ.

*************************************

ಭಂಡಸೈನ್ಯ-ವಧೋದ್ಯುಕ್ತ-ಶಕ್ತಿ-ವಿಕ್ರಮ-ಹರ್ಷಿತಾ I

ನಿತ್ಯಾ-ಪರಾಕ್ರಮಾಟೋಪ-ನಿರೀಕ್ಷಣ-ಸಮುತ್ಸುಕಾ II28II

ಭಂಡಸೈನ್ಯ-ವಧೋದ್ಯುಕ್ತ-ಶಕ್ತಿ-ವಿಕ್ರಮ-ಹರ್ಷಿತಾ -ಭಂಡಾಸುರ ನ ಸೈನ್ಯವನ್ನು ನಾಶ ಮಾಡಬೇಕೂಂತ, ತನ್ನ ಸೈನ್ಯದ ಶಕ್ತಿ ವಿಕ್ರಮಗಳನ್ನು ನೋಡಿ ತಾಯಿ ಹರ್ಷಿತಳಾಗಿದ್ದಾಳೆ.

ನಿತ್ಯಾ-ಪರಾಕ್ರಮಾಟೋಪ-ನಿರೀಕ್ಷಣ-ಸಮುತ್ಸುಕಾ – ನಿತ್ಯರು (15 ದೇವತೆಗಳು )ಪರಾಕ್ರಮದ (skill) ಆಟೋ ಟೋಪಗಳನ್ನು ನೋಡಿ ತಾಯಿ ಉತ್ಸುಕಳಾಗಿದ್ದಾಳೆ(Excited).

ಇವರ ಜೊತೆ ತಾಯಿ ಭಂಡಾಸುರ ನನ್ನು ಸಂಹಾರ ಮಾಡುವುದಕ್ಕೋಸ್ಕರ ಬರುತ್ತಾ ಇದ್ದಾಳೆ.

*************************************

ಭಂಡಪುತ್ರ-ವಧೋದ್ಯುಕ್ತ-ಬಾಲಾ-ವಿಕ್ರಮ-ನಂದಿತಾ I

ಮಂತ್ರಿಣ್ಯಂಬಾ-ವಿರಚಿತ-ವಿಷಂಗ-ವಧ-ತೋಷಿತಾ II29II

1.ಭಂಡಪುತ್ರ-ವಧೋದ್ಯುಕ್ತ-ಬಾಲಾ-ವಿಕ್ರಮ-ನಂದಿತಾ ಭಂಡಾಸುರನ (30)ಪುತ್ರರ ವಧೆಯನ್ನುಬಾಲಾ ತ್ರಿಪುರ ಸುಂದರಿ(ತಾಯಿಯ 9 ವರುಷದ ಮಗಳು)ಮಾಡುತ್ತಾಳೆ. ಮಗಳ ಪರಾಕ್ರಮವನ್ನು(Skill) ನೋಡಿ ಆನಂದಿತಳಾಗುತ್ತಾಳೆ.

2.ಮಂತ್ರಿಣ್ಯಂಬಾ-ವಿರಚಿತ-ವಿಷಂಗ-ವಧ-ತೋಷಿತಾ – ಆಕೆಯ ಮಂತ್ರಿಣಿ ಶ್ಯಾಮಲಾಂಬಯಿಂದ ವಿಷಂಗನ(Brother of Bhandasura) ವಧೆಯನ್ನುನೋಡುತ್ತಾ ತಾಯಿಗೆಸಂತೋಷವಾಗುತ್ತದೆ.

ವಿಷುಕ್ರ-ಪ್ರಾಣಹರಣ-ವಾರಾಹೀ-ವೀರ್ಯ-ನಂದಿತಾ I

ಕಾಮೇಶ್ವರ-ಮುಖಾಲೋಕ-ಕಲ್ಪಿತ-ಶ್ರೀಗಣೇಶ್ವರಾ II30II

ವಿಷುಕ್ರ-ಪ್ರಾಣಹರಣ-ವಾರಾಹೀ-ವೀರ್ಯ-ನಂದಿತಾ – ವಿಷುಕ್ರ (Brother of Bhandasura)ಪ್ರಾಣವನ್ನು ವಾರಾಹಿಯು ಪರಾಕ್ರಮದಿಂದ ಪ್ರಾಣ ಹರಣ ಮಾಡುತ್ತಾಳೆ. ಅದನ್ನು ನೋಡಿ ತಾಯಿ ಹರ್ಷಿತಳಾಗುತ್ತಾಳೆ.

ಕಾಮೇಶ್ವರ-ಮುಖಾಲೋಕ-ಕಲ್ಪಿತ-ಶ್ರೀಗಣೇಶ್ವರಾ –ಕಾಮೇಶ್ವರನನ್ನು ಪ್ರಾರ್ಥಿಸಿ ಗಣೇಶ್ ವರನನ್ನು ರಣರಂಗಕ್ಕೆ ಆಹ್ವಾನಿಸುತ್ತಾರೆ.

*************************************

ಮಹಾಗಣೇಶ-ನಿರ್ಭಿನ್ನ-ವಿಘ್ನಯಂತ್ರ-ಪ್ರಹರ್ಷಿತಾ I

‌ಭಂಡಾಸುರೇಂದ್ರ-ನಿರ್ಮುಕ್ತ- ಶಸ್ತ್ರ-ಪ್ರತ್ಯಸ್ತ್ರ-ವರ್ಷಿಣೀ II31II

1)ಮಹಾಗಣೇಶ-ನಿರ್ಭಿನ್ನ-ವಿಘ್ನಯಂತ್ರ-ಪ್ರಹರ್ಷಿತಾ ಭಂಡಾಸುರನಿಂದ ವಿಘ್ನಗಳನ್ನು ಆದಮಹಾಗಣೇಶ ಪರಿಹಾರಿ ಸುತ್ತಿದ್ದಾನೆ.

2)ಭಂಡಾಸುರೇಂದ್ರ-ನಿರ್ಮುಕ್ತ- ಶಸ್ತ್ರ-ಪ್ರತ್ಯಸ್ತ್ರ-ವರ್ಷಿಣೀ – ಭಂಡಾಸುರನ ಅಸ್ತ್ರ ಗಳಿಗೆ (🏹)ಪ್ರತಿಯಾಗಿಶಸ್ತ್ರಗಳನ್ನು (🏹) ಜಗನ್ಮಾತೆಕಾರ್ಯೋನ್ಮುಖ ಳಾಗಿದ್ದಾಳೆ.

*************************************

ಕರಾಂಗುಲಿ-ನಖೋತ್ಪನ್ನ-ನಾರಾಯಣ-ದಶಾಕೃತಿಃ I

ಮಹಾ-ಪಾಶುಪತಾಸ್ತ್ರಾಗ್ನಿ-ನಿರ್ದಗ್ಧಾಸುರ-ಸೈನಿಕಾ II32II

ಶ್ರೀಮಾತೆಯ ಬೆರಳುಗಳ ಉಗುರಿನಿಂದ ನಾರಾಯಣ ದಶಾ ಕೃತಿಗಳು ಉದ್ಭವಿಸಿ ಭಂಡಾಸುರನ and ಅವನ ವಿವಿಧ ರೂಪಗಳನ್ನು ನಾಶಮಾಡಲು ಮಹಾ ಪಾಶುಪತಾಸ್ತ್ರ ದಿಂದಭಂಡಾಸುರ ಸೈನ್ಯವನ್ನು ನಾಶಗೊಳಿಸಿದ ಮಾತೆ.

*************************************

ಕಾಮೇಶ್ವರಾಸ್ತ್ರ-ನಿರ್ದಗ್ಧ-ಸಭಂಡಾಸುರ-ಶೂನ್ಯಕಾ I

ಬ್ರಹ್ಮೋಪೇಂದ್ರ-ಮಹೇಂದ್ರಾದಿ-ದೇವ-ಸಂಸ್ತುತ-ವೈಭವಾ II33II

1)ಕಾಮೇಶ್ವರಾಸ್ತ್ರ-ನಿರ್ದಗ್ಧ-ಸಭಂಡಾಸುರ-ಶೂನ್ಯಕಾ – ಕಾಮೇಶ್ವರಾಸ್ತ್ರ(🏹) ದಿಂದ ಭಂಡಾಸುರನನ್ನು ಜೊತೆಗೆ ಭವ್ಯವಾದ ಶೌನ್ಯಕನಗರ ವನ್ನು ಸುಟ್ಟು ಹಾಕುತ್ತಾಳೆ.

2)ಬ್ರಹ್ಮೋಪೇಂದ್ರ-ಮಹೇಂದ್ರಾದಿ-ದೇವ-ಸಂಸ್ತುತ-ವೈಭವಾ – ಬ್ರಹ್ಮ, ಮಹೇಂದ್ರ ,ವಿಷ್ಣು ಮತ್ತು ಅನೇಕ ದೇವಗಣಗಳು ಶ್ರೀಮಾತೆಯ ಜಯಕಾರ ಮಾಡುತ್ತಾ ಆಕೆಯ ವೈಭವವನ್ನು ಕೊಂಡಾಡುತ್ತಾ ಭಂಡಾಸುರನಿಂದ ಮುಕ್ತಿ ಹೊಂದುತ್ತಾರೆ.

*************************************

ಹರನೇತ್ರಾಗ್ನಿ ಸಂದಗ್ಧ ಕಾಮ ಸಂಜೀವನೌಷಧಿಃ |

ಶ್ರೀಮದ್ವಾಗ್ಭವ ಕೂಟೈಕ ಸ್ವರೂಪ ಮುಖಪಂಕಜಾ || 34 ||

ಹರ-ನೇತ್ರಾಗ್ನಿ-ಸಂದಗ್ಧ-ಕಾಮ-ಸಂಜೀವನೌಷಧಿಃ I ಶಿವನ ಕಣ್ಣಿನಿಂದ ಉಂಟಾದ ಅಗ್ನಿಯಿಂದ ಸುುಟ್ಟಿದಅಂತ ಕಾಮನಿಗೆ (ಮನ್ಮಥ) ಸಂಜೀವಿನಿ ಆದಳು ಜಗನ್ಮಾತೆ.

34)a)1)ಸೂಕ್ಷ್ಮ- ಪಂಚದಶಾಕ್ಷರೀ ಮಂತ್ರ

2)ಸೂಕ್ಷ್ಮತರ – ಕಾಮಕಲಾ

3)ಸೂಕ್ಷ್ಮ ತಮ – ಕುಂಡಲಿನಿ

ಕುಂಡಲಿನಿ ಯೋಗ ರಹಸ್ಯ (34(b)-37)

ಶ್ರೀಮದ್ವಾಗ್ಭವ-ಕೂಟೈಕ-ಸ್ವರೂಪ-ಮುಖ-ಪಂಕಜಾ II34I

1)ಶ್ರೀಮದ್ವಾಗ್ಭವ-ಕೂಸಹಸ್ರನಾಮದ ಬೀಜ (Face -ಜ್ಞಾನ ಪ್ರಧಾನಿ)

2)ಮಧ್ಯ ಕೂಟ – ಸಹಸ್ರನಾಮದ ಶಕ್ತಿ(ಕಂಠದಿಂದ -ಕಟಿ ಪ್ರದೇಶ)

3)ಶಕ್ತಿ ಕೂಟ – ಕೀಲಕ (ಕಟಿ ಪ್ರದೇಶದ ಕೆಳಬಾಗಕ್ಕೆ ಅದೋ ಭಾಗ)

*************************************

ಕಂಠಾಧಃಕಟಿಪರ್ಯಂತಮಧ್ಯಕೂಟಸ್ವರೂಪಿಣೀ I

ಶಕ್ತಿ-ಕೂಟೈಕ-ತಾಪನ್ನ-ಕಟ್ಯಧೋಭಾಗ ಧಾರಿಣೀ II35II

ಪಂಚದಶ (15 ಅಕ್ಷರಗಳು):

ವಾಗ್ಭವಕೂಟ (ಭಾಗ) – ಮುಖ ಪಂಕಜ – 5 ಅಕ್ಷರಗಳು = ಕ,ಎ,ಇ,ಲ,ಹ್ರೀಂ

ಮಧ್ಯ ಕೂಟಕಾಮರಾಜ ಕೂಟ – 6 ಅಕ್ಷರಗಳು = ಆ,ಸ,ಕ,ಹ, ಲಿ,ಹ್ರೀಂ

ಶಕ್ತಿ ಕೂಟ 4 ಅಕ್ಷರಗಳು = ಸ,ಖ,ಲ,ಹ್ರೀಂ

*************************************

ಮೂಲ-ಮಂತ್ರಾತ್ಮಿಕಾ ಮೂಲಕೂಟತ್ರಯ-ಕಲೇವರಾ I

ಕುಲಮೃತೈಕ-ರಸಿಕಾ ಕುಲಸಂಕೇತ-ಪಾಲಿನೀ II36II

1)ಮೂಲ-ಮಂತ್ರಾತ್ಮಿಕಾ ಮೂಲಕೂಟತ್ರಯ-ಕಲೇವರಾಸಾಧಕ ಪ್ರಾಣಾಯಾಮದಿಂದ ಮೂಲಾಧಾರದಿಂದ (ರೇಚಕ, ಪೂರಕ, ಕುಂಭಕ) ಕುಂಡಲಿಯನ್ನು ಜಾಗೃತಗೊಳಿಸಿ ಚಕ್ರಗಳ 6 ಚಕ್ರಗಳ ಮೂಲಕ ಸಹಸ್ರಾರ ದಲ್ಲಿ ದೇವಿಯನ್ನು ಆರಾಧಿಸಿ ಅಮೃತತ್ವವನ್ನು ಹೊಂದುವುದು.

ಕುಲಸಂಕೇತ – ವಿವಿಧ ರೀತಿಯಲ್ಲಿ ಆರಾಧಿಸುವ ಪದ್ಧತಿ . 3 ರೀತಿಯಲ್ಲಿ ಆರಂಭಿಸಲಾಗುವುದು – ಭಕ್ತಿ ಸಂಕೇತ , ಮಂತ್ರ ಸಂಕೇತ, ಪೂಜಾ ಸಂಕೇತ

ಕುಲಾಂಗನಾ – ಮಹಾಸಾಧ್ವಿ , ಶ್ರೀ ಚಕ್ರೇಶ್ವರಿ , ನಿತ್ಯ ದೇವತೆಗಳ ರೂಪದಲ್ಲಿ, ಮಹಾ ಪತಿವ್ರತೆ ಹೀಗೆ ವಿವಿಧ ರೂಪದಲ್ಲಿರುವ ದೇವಿ ಎಲ್ಲಾ ಪ್ರಕಾರದ.

ಮೂಲಾದಾರೈಕ-ನಿಲಯಾ ಬ್ರಹ್ಮಗ್ರಂಥಿ ವಿಭೇದಿನೀ I

ಮಣಿ-ಪೂರಾಂತರುದಿತಾ ವಿಷ್ಣುಗ್ರಂಥಿ-ವಿಭೇದಿನೀ II38II

ಮೂಲಾಧಾರ ಉದದಬಳಿ – 4 ದಳ ಪದ್ಮ -ಬ್ರಹ್ಮಗ್ರಂಥಿ

ಸ್ವಾಧಿಷ್ಠಾನ – ಲಿಂಗ or ಯೋನಿ ಸ್ಥಾನ (ಜಲತತ್ವ) – 6 ದಳ ಪದ್ಮ

ಮಣಿಪುರ – ನಾಭಿ ಸ್ಥಾನ (ಅಗ್ನಿ ತತ್ವ)10 ದಳ ಪದ್ಮ

ಅನಾಹತ – ಹೃದಯ ಸ್ಥಾನ (ವಾಯು ತತ್ವ) – 12 ದಳ ಪದ್ಮ ವಿಷ್ಣು ಗ್ರಂಥಿ

ವಿಶುದ್ಧಿ ಚಕ್ರ – ಕಂಠ ಸ್ಥಾನ (ಆಕಾಶ ತತ್ವ) – 16 ದಳ ಪದ್ಮ

ಆಜ್ಞಾಚಕ್ರ ಹುಬ್ಬಿನ ಮಧ್ಯೆ – ಮನಸ್ಸು – 2 ದಳ ಪದ್ಮ

ಸಹಸ್ರಾರ – ನೆತ್ತಿಯ ಮಧ್ಯಭಾಗ – ರುದ್ರ ಗ್ರಂಥಿ

ಸುಧಾ ಸಾರಾಭಿ ವರ್ಷಿಣಿ

40) ಸಾಧಕನು 6ಚಕ್ರಗಳ ಮೂಲಕ ಶಕ್ತಿಯನ್ನು ಮೂಲಾಧಾರದಲ್ಲಿ 3 1/2 ಸುತ್ತು ಹಾಕಿಕೊಂಡು ಮಲಗಿರುವ ಸರ್ಪದಂತೆ ಇರುವ ಶಕ್ತಿಯನ್ನು ಜಾಗೃತಗೊಳಿಸಿ ಸಹಸ್ರಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಶನ ಮಾಡಿ ಅಮೃತ ಪಾನವನ್ನು ಎಲ್ಲಾ ಶರೀರದ ಗಾಡಿಗಳಿಗೆ ಮಾಡಿಸುತ್ತಾನೆ.

ತಟಿಲ್ಲತಾ ಸಮರುಚಿಃ, ಷಟ್-ಚಕ್ರೋಪರಿ ಸಂಸ್ಥಿತಾ |

ಮಹಾಶಕ್ತಿಃ, ಕುಂಡಲಿನೀ, ಬಿಸತಂತು ತನೀಯಸೀ || 40 ||

ಭವಾನೀ, ಭಾವನಾಗಮ್ಯಾ, ಭವಾರಣ್ಯ ಕುಠಾರಿಕಾ |

‌ಭದ್ರಪ್ರಿಯಾ, ಭದ್ರಮೂರ್ತಿ, ರ್ಭಕ್ತಸೌಭಾಗ್ಯ ದಾಯಿನೀ || 41 ||

ಭವ – ಅಷ್ಟಮೂರ್ತಿಗಳಲ್ಲಿ (ಭವ, ಉಗ್ರ, ಪಶುಪತಿ, ಈಶಾನ, ರುದ್ರ, ಮಹದೇವ ,ಭೀಮ) ಜಲ ರೂಪದಲ್ಲಿರುವ ಶಿವ. ಭವ ನನ್ನು ಅನುಸರಿಸುವ ರಾಣಿ ಭವಾನೀ.

ಭಕ್ತರು ಭೋಗ ಭಾಗ್ಯಗಳನ್ನು ಅನುಭವಿಸುವಾಗಲೇ DOUBT ಜ್ಞಾನಮಾರ್ಗದಿಂದ ಮುಕ್ತಿ ಮಾರ್ಗಕ್ಕೆ ಕರೆದುಕೊಂಡು ಹೋಗುವುದು

ಭವಾನೀ ಯಾವ ರೂಪದಲ್ಲಿ ಆರೋಪದಲ್ಲಿ ದರ್ಶನ OR ಕೋರಿಕೆಯನ್ನು ಪೂರೈಸುವ ಮಾತೆ.

ಭಾವನಾಗಮ್ಯಾ ಭವದ ಅರಣ್ಯದಲ್ಲಿ ಅರಣ್ಯದಿಂದ ಮುಕ್ತಿ ಪಡೆಯುವನಾಮದ ಆರಾಧನೆಯಿಂದ ಸಾಧ್ಯವಿದೆ .ಭದ್ರ ಪ್ರಿಯಳಾಗಿ ಭಕ್ತರಿಗೆ ಜೀವನದಲ್ಲಿ ಭದ್ರತೆ ಮತ್ತು ಸೌಭಾಗ್ಯವನ್ನು(ಐಶ್ವರ್ಯ ,ಫಲ, ಕೀರ್ತಿ, ಸಂಪತ್ತು, ಜ್ಞಾನ, ವೈರಾಗ್ಯ) ನೀಡುತ್ತಾಳೆ.

ಭಕ್ತಿಪ್ರಿಯಾ ಭಕ್ತಿಗಮ್ಯಾ ಭಕ್ತಿವಶ್ಯಾ ಭಯಾಪಹ I

ಶಾಂಭವೀ ಶಾರದಾರಾಧ್ಯಾ ಶರ್ವಾಣೀ ಶರ್ಮದಾಯಿನೀ II42II

ಭಕ್ತಿವಶ್ಯಾ – ಯಾರು ಶರಣಾಗತಿಯಿಂದ ನಿಸ್ವಾರ್ಥ, ನಿಷ್ಕಲ್ಮಶ ಭಕ್ತಿಯನ್ನು ಮಾಡುತ್ತಾರೆ ಅವರಿಗೆ ಪ್ರತಿಸ್ಪಂದಿಸುವ ಚೈತನ್ಯ ಜಗನ್ಮಾತೆ.

ಯಾರು ಜಗನ್ಮಾತೆಯನ್ನು ಶರಣಾಗತಿಯಿಂದ ನಿಸ್ವಾರ್ಥ, ನಿಷ್ಕಲ್ಮಶ ಭಕ್ತಿಯನ್ನು ಮಾಡುತ್ತಾರೆ ಅವರಿಗೆ ವಶವಾಗುತ್ತಾಳೆ. (DOUBT)

ಭಯಾಪಹ – ಯಾರು ತಾಯಿಯನ್ನು ನಿರಂತರ ಸ್ಮರಣೆ ಮಾಡುತ್ತಾರೋ ಅವರಿಗೆ ಯಾವ ಆಪತ್ತನ್ನು ಬರುವುದಿಲ್ಲ,ಅಕಸ್ಮಾತಾಗಿ ಬಂದರೂ ಕೂಡ ತಾತ್ಕಾಲಿಕ.

ಶಾಂಭವೀ – ಸಾಧಕ ಅರ್ಧ ಕಣ್ಣನ್ನು ತೆರೆದು ಆಂತಃಮು೯ಖನಾಗಿ ಭಕ್ತಿಯಿಂದ ಮಾತೆಯ ದರ್ಶನ ಮಾಡುವಾಗ ಹಿಡಿಯುವ ಮುದ್ರೆ ಶಾಂಭವೀ ಮುದ್ರೆ.

ಶಾರದಾರಾಧ್ಯಾ – ಶಾರದೆ ಯಿಂದ ಚಾಮರ ಸೇವೆಯನ್ನು ಪಡೆಯುವವಳು ಶಾರದಾರಾಧ್ಯಾ . ಸಾಕ್ಷಾತ್ ಶಾರದೆಯೇ ಅವಳನ್ನು ಆರಾಧಿಸುತ್ತಾಳೆ.

ಶರ್ವಾಣೀ – ಶರವಣ(ಪರಶಿವ ಸಿದ್ಧ ಮೂರ್ತಿಗೆ ಶರ್ಮ ಅಂತಾರೆ ) ಪತ್ನಿ(Wife) ಶರ್ವಾಣೀ. ಮಾನಸಿಕ ಶರೀರಿಕ ಸುಖ ಕೊಡುವ ಜಗನ್ಮಾತೆ.

ಶಾಂಕರೀ ಶ್ರೀಕರೀ‌ ಸಾಧ್ವೀ ಶರಶ್ಚಂದ್ರ-ನಿಭಾನನಾ I

ಶಾತೋದರೀ ಶಾಂತಿಮತೀ ನಿರಾಧಾರಾ ನಿರಂಜನಾ II43II

ಶ್ರೀಕರೀ‌ – [ಕರ = ಕೈ( Hands )] ಎಲ್ಲಾ ಶುಭವನ್ನು ಕೊಡುವ.

ಶರಶ್ಚಂದ್ರ – ಬೆಳದಿಂಗಳನ್ನು ಕೊಡುವ ಚಂದ್ರನಂತೆ ತಂಪನ್ನು ಕೊಡುವ ಮುಖಭಾವ.

ಶಾತೋದರೀತಂಪನ್ನು ಬೀರುವ ಶಾಂತತೆ ಸ್ಮರಣೆ ಮಾಡಿದೆ ಮಾಡಿದವರು ಶಾಂತಿಯನ್ನು ಪ್ರಸಾರಿಸುವ ಪ್ರಸಾದಿ ಸುವ

ಸಕಲ ಲೋಕಗಳಿಗೆ ಆಧಾರವಾಗಿರುವ ಜಗನ್ಮಾತೆಗೆ ಯಾವ ಆಧಾರವೂ ಇಲ್ಲ,

ದೋಷರಹಿತ ಳು, ಪವಿತ್ರ ಸ್ವಚ್ಛವಾದ ಜಗನ್ಮಾಥೆ.

Shloka 43(ii) – 51(i) ನಿರ್ಗುಣ ರೂಪ

ಜಗನ್ಮಾತೆಗೆ ಯಾವ ಲೇಪವೂ (ಮಾಯಾ and ಭವ ಬಂಧನ )ಇಲ್ಲ.

ದೇಶ ಕಾಲಗಳಿಗೆ ಅತಿತಳು, ಯಾವ ಬದಲಾವಣೆಯೂ ಇಲ್ಲ(ಜನ್ಮ ಮರಣ ಇಲ್ಲ) .

ಯಾವ ಆಕಾರವು ಇಲ್ಲ.

ಜಗನ್ಮಾತೆಗೆ ಯಾವ ಅಕುಲತೆ ಇಲ್ಲ.

ಯಾವ ಗುಣಗಳು ಇಲ್ಲ ಯಾವ ಅವಯವು ಇಲ್ಲ ಅತ್ಯಂತ ಶಾಂತ ಸ್ವರೂಪಳು

ಅಸೂಯೆ ಇಲ್ಲ.

ನಾಶವಿಲ್ಲದ ವಳು

ದುಷ್ಟದೂರಾ ದುರಾಚಾರ-ಶಮನೀ ದೋಷವರ್ಜಿತಾ I

ದುಷ್ಟದೂರಾ ದುಷ್ಟ or ಕಪಟ ಭಕ್ತರಿಂದ ದೂರವಾಗುವ ಜಗನ್ಮಾತೆ.

ದುರಾಚಾರ-ಶಮನೀ – ಅಹಂಕಾರ ,ನಾಸ್ತಿಕ ಭಾವ ದುರಾಚಾರದಲ್ಲಿರುವ ಭಕ್ತರನ್ನು ಸದಾಚಾರ ಮಾರ್ಗದಲ್ಲಿ ಪ್ರೇರೇಪಿಸುವವಳು . or

ಭಕ್ತರ ದುರಾಚಾರ(ಅಹಂಕಾರ ,ನಾಸ್ತಿಕ ಭಾವ)ವನ್ನು ನಾಶ ಮಾಡುವವಳು.

ದೋಷವರ್ಜಿತಾ – ಅವಳಿಗೆ ಯಾವ ದೋಷಗಳು ಇಲ್ಲ.

*************************************

ನಿರ್ಲೇಪಾ ನಿರ್ಮಲಾ ನಿತ್ಯಾ ನಿರಾಕಾರಾ ನಿರಾಕುಲಾ I

ನಿರ್ಗುಣಾ ನಿಷ್ಕಲಾ ಶಾಂತಾ ನಿಷ್ಕಾಮಾ ನಿರುಪಪ್ಲವಾ II44II

ನಿರ್ಲೇಪಾ –

Shloka 51(i) – 60 ಸಗುಣೋಪಾಸನೆ

ಸರ್ವಜ್ಞಾ ಸಾಂದ್ರಕರುಣಾ ಸಮಾನಾಧಿಕ-ವರ್ಜಿತಾ II51II

ಸರ್ವಜ್ಞಾ – ಜಗನ್ಮಾತೆ ಎಲ್ಲವನ್ನೂ ತಿಳಿದಿರುವವನು ಭೂತ ಭವಿಷ್ಯ ವರ್ತಮಾನ.

ಸಾಂದ್ರಕರುಣಾ-ತುಂಬಾ ಕರುಣೆಯನ್ನು ಹೊಂದಿರುವವಳು.

ಸಮಾನಾಧಿಕ-ವರ್ಜಿತಾ – ಜಗನ್ಮಾತೆಗೆ ಸಮಾನ ದವರು ಮೂರು ಲೋಕದಲ್ಲಿ ಯಾರು ಇಲ್ಲ.

*************************************

ಸರ್ವಶಕ್ತಿಮಯೀ ಸರ್ವಮಂಗಳಾ ಸದ್ಗತಿಪ್ರದಾ I

ಸರ್ವೇಶ್ವರೀ ಸರ್ವಮಯೀ ಸರ್ವಮಂತ್ರಸ್ವರೂಪಿಣೀ II52II

ಸರ್ವಶಕ್ತಿಮಯೀ – ಇಡೀ ಬ್ರಹ್ಮಾಂಡದ ಸರ್ವ ಶಕ್ತಿಗೆ ಕಾರಣವಾಗಿರುವ (ಸೃಷ್ಟಿ-ಸ್ಥಿತಿ-ಲಯಕ್ಕೆ) ಮೂಲ ಶಕ್ತಿಯೇ ಪರಾಶಕ್ತಿ.

ಸರ್ವಮಂಗಳಾಈಶ್ವರನ ಪತ್ನಿ ಮಂಗಳಮಯಿಯಾದ ಸರ್ವ ಸೌಭಾಗ್ಯವನ್ನು ಪ್ರಸಾದಿಸುವ ಸರ್ವಮಂಗಳೆ.

ಸದ್ಗತಿಪ್ರದಾ – ಭಕ್ತರ ಪಾಪ ಪುಣ್ಯಗಳಿಂದ ಸದ್ಗತಿ ಪ್ರಸಾರಿಸುವ ಸದ್ಗತಿಪ್ರದಾ.

ಸರ್ವೇಶ್ವರೀ –.

ಸರ್ವಮಯೀ – [DOUBT – first line] ಸರ್ವಲೋಕಗಳ ಸಮಸ್ತವೂ ತಾಯಿಯಲ್ಲೇ ಅಡಗಿದೆಯಾದ್ದರಿಂದ ಸರ್ವಮಯೀ.

ಸರ್ವಮಂತ್ರಸ್ವರೂಪಿಣೀ – ಸಪ್ತಕೋಟಿ ಮಂತ್ರಗಳಲ್ಲಿ ರೂಪವಾಗಿರುವ ಜಗನ್ಮಾತೆ ಮಂತ್ರ ಸ್ವರೂಪಿಣಿ.

*************************************

ಸರ್ವಯಂತ್ರಾತ್ಮಿಕಾ ಸರ್ವತಂತ್ರರೂಪಾ ಮನೋನ್ಮನೀ I

ಮಾಹೇಶ್ವರೀ ಮಹಾದೇವೀ ಮಹಾಲಕ್ಷ್ಮೀ ರ್ಮೃಡಪ್ರಿಯಾ II53II

ಸರ್ವಯಂತ್ರಾತ್ಮಿಕಾ – ಎಲ್ಲಾ ಯಂತ್ರಗಳು ದೇವಿ ಸ್ವರೂಪ ವಾಗಿರುವ ಸರ್ವಯಂತ್ರಾತ್ಮಿಕಾ . ಶ್ರೀಚಕ್ರ – ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಪೂಜೆ

ಸರ್ವತಂತ್ರರೂಪಾ -.

ಮನೋನ್ಮನೀ – ಉನ್ಮನೀ (ಚಲಿಸದಂತಹ ಸ್ಥಿತಿ ) ಮನಸನ್ನು ಚಲಿಸದಂತೆ ಸ್ಥಿತಿಯಲ್ಲಿ ಇರುವ ಮನೋನ್ಮನೀ.

ಮಾಹೇಶ್ವರೀ ಮಹಾದೇವೀ ಮಹಾಲಕ್ಷ್ಮೀ ರ್ಮೃಡಪ್ರಿಯಾ – ಮೃಡ (ಶಿವ) ಸತ್ವಗುಣ ಪ್ರಧಾನವಾದ ಮೃಡನ ಪತ್ನಿ .

ಮಹಾರೂಪಾ ಮಹಾಪೂಜ್ಯ ಮಹಾಪಾತಕನಾಶಿನೀ I

ಮಹಾಮಾಯಾ ಮಹಾಸತ್ವಾ ಮಹಾಶಕ್ತಿರ್ಮಹಾರತಿಃ II54II

ಮಹಾರೂಪಾ – ಊಹಿಸಲು ಸಾಧ್ಯವಾದ ವಿರಾಟ್ ರೂಪ (ಸಗುಣ -ನಿರ್ಗುಣ, ಜಡ – ಚೈತನ್ಯ, ಸಾಕಾರ -ನಿರಾಕಾರ ಊಹಿಸಿದಂತೆ ರೂಪಗೊಳ್ಳುವ ಜಗನ್ಮಾತೆ).

ಮಹಾಪೂಜ್ಯ – ಸರ್ವ ದೇವತೆಗಳು ,ರಾಕ್ಷಸರು, ಕಿನ್ನರ, ಅಪ್ಸರಗಣ & ಇಡೀ ಚರಾಚರ ವಸ್ತುಗಳು ಜಗನ್ಮಾತೆಯನ್ನು ಪೂಜಿಸುತ್ತಾರೆ.

ಮಹಾಪಾತಕನಾಶಿನೀ – ಸರ್ವ ಪಾಪಗಳನ್ನು ನಾಶಮಾಡುವ ಮಹಾಪಾತಕನಾಶಿನೀ.

ಮಹಾಮಾಯಾ – ಗೋಕುಲದಲ್ಲಿ ನಂದ ಮತ್ತು ಯಶೋದೆಯ ಪುತ್ರಿಯಾಗಿ ಕೃಷ್ಣನ ಸ್ಥಳದಲ್ಲಿ ಬದಲಾಯಿಸಿದ ಹೆಣ್ಣು ಮಗುವಾಗಿ ಜನಿಸಿದ ಮಹಾಮಾಯೆ.

ಮಹಾಸತ್ವಾ –ಸತ್ವಗುಣ ವನ್ನು ಪ್ರಸಾದಿಸುವ ಜಗನ್ಮಾತೆ.

ಮಹಾಶಕ್ತಿರ್ಮಹಾರತಿಃ – ಬ್ರಹ್ಮ,ವಿಷ್ಣು,ರುದ್ರ ರಿಗೂ ಶಕ್ತಿಯನ್ನು ಪ್ರಸಾದಿಸುವ ಮಹಾಶಕ್ತಿ.

ಮಹಾರತಿ – ಮಹಾ ಕಾಮನ ಪತ್ನಿ ಮಹಾರತಿ.

ಮಹಾಭೋಗಾ ಮಹೈಶ್ವರ್ಯಾ ಮಹಾವೀರ್ಯಾ ಮಹಾಬಲಾ I

ಮಹಾಬುದ್ಧಿ-ರ್ಮಹಾಸಿದ್ದಿ ರ್ಮಹಾ ಯೋಗೇಶ್ವರೇಶ್ವರಿ II55II

ಮಹಾಭೋಗಾ – ಭೋಗಾ (ಐಶ್ವರ್ಯ) ಭಕ್ತರಿಗೆ ಎಲ್ಲಾತರದ ಐಶ್ವರ್ಯವನ್ನು ಪ್ರಸಾಧಿಸುವ.

ಮಹೈಶ್ವರ್ಯಾ –ದೇವ, ದಾನವ, ಮಾನವರಿಗೂ ಐಶ್ವರ್ಯವನ್ನು ಪ್ರಸಾಧಿಸುವಮಹೈಶ್ವರ್ಯಾ.

ಮಹಾವೀರ್ಯಾ – ಜಗನ್ಮಾತೆಯ ಮೀರಿದ ಶಕ್ತಿ ಯಾವುದು ಇಲ್ಲ.

ಮಹಾಬಲಾ – ಆಕೆಯ ಬಲವನ್ನು ಯಾರು ಜಹಿ ಸಕೆ ಸಾಧ್ಯವಿಲ್ಲ .ಆದರೆ ಆಕೆಯ ಬಲವನ್ನು ಉಪಯೋಗಿಸಿನಾವೆಲ್ಲ ಕೂಡ ಜಯಿಸಬಹುದು.

ಮಹಾಬುದ್ಧಿ-ರ್ಮಹಾಸಿದ್ದಿ – ವಿಶೇಷ ಬುದ್ಧಿಯುಳ್ಳ ಮಹಾ ಬುದ್ಧಿ. ಸಾಧಕರಿಗೆ ಸದಾ ಸಿದ್ಧಿಯನ್ನು ಕೊಡುವ ರ್ಮಹಾಸಿದ್ದಿ.

ರ್ಮಹಾ ಯೋಗೇಶ್ವರೇಶ್ವರಿ –

ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಪೂಜೆ ಎಲ್ಲಾ ತಂತ್ರಗಳಿಗೂ (64)ಮಾತೆಯೇ ಸ್ವರೂಪಿಣಿ .

ಮಹಾಮಂತ್ರ – ಶ್ರೀ ವಿದ್ಯೆಯೇ ಮಹಾ ಮಂತ್ರ

ಶ್ರೀ ವಿದ್ಯೆಯೇ ಮಹಾ ಮಂತ್ರ

ಪಂಚಭೂತಗಳೇ ಆಸನವಾಗಿ ಮಾಡಿಕೊಂಡಿರುವ ಹಾಸನ

ಕಟೋರವಾದ ವಿಧಿ-ವಿಧಾನಗಳಿಂದ ಪೂಜೆ ಆಚರಣೆಯ ವಿಧಾನ ಮಹಾಯಾಗ.

ಉಗ್ರರೂಪ ನಾದ ಭೈರವ ಪ್ರಳಯ ಕಾಲದಲ್ಲಿ ಜಗನ್ಮಾತೆಯನ್ನು ಆರಾಧಿಸುತ್ತಾನೆ.

*************************************

ಮಹೇಶ್ವರ ಮಹಾಕಲ್ಪಾ ಮಹಾತಾಂಡವಸಾಕ್ಷಿಣಿ I

ಮಹಾಕಾಮೇಶಮಹಿಷೀ ಮಹಾತ್ರಿಪುರ ಸುಂದರೀ II57II

ಮಹೇಶ್ವರ ಮಹಾಕಲ್ಪಾ ಮಹಾತಾಂಡವಸಾಕ್ಷಿಣಿ – ಮಹಾ ಪ್ರಳಯ ಕಾಲದಲ್ಲಿ ಮಹೇಶ್ವರ ತಾಂಡವ ನೃತ್ಯ (dance) ಮಾಡುವಾಗ ಜಗನ್ಮಾತೆ ಸಾಕ್ಷಿಯಾಗಿ ವೀಕ್ಷಿಸುತ್ತಿದ್ದಳು .

ಮಹಾಕಾಮೇಶಮಹಿಷೀ – ಮಹಾ ಕಾಮೇಶ್ವರ ನ ಪಟ್ಟದರಾಣಿ ಮಹಾಕಾಮೇಶಮಹಿಷೀ.

ಮಹಾತ್ರಿಪುರ ಸುಂದರೀ – ಶರೀರದ 3 ಶರೀರ ತ್ರಯಗಳು ( ಮಾರ್ಗ) ಇವುಗಳಿಂದ ಶರೀರಕ್ಕೆ ಸೌಂದರ್ಯವನ್ನು ಕೊಡುವ ತ್ರಿಪುರ ಸುಂದರಿ.

*************************************

ಚತುಃಷಷ್ಟ್ಯುಪಚಾರಾಢ್ಯಾ ಚತುಷ್ಷಷ್ಟಿ ಕಲಾಮಯೀ I

ಮಹಾಚತುಷ್ಷಷ್ಟಿಕೋಟಿ ಯೋಗಿನೀ ಗಣಸೇವಿತಾ II58I

ಚತುಃಷಷ್ಟ್ಯುಪಚಾರಾಢ್ಯಾ – 64 ಉಪಚಾರಗಳಿಂದ ಶಾರೀರಿಕ & ಮಾನಸಿಕವಾಗಿ ಭಕ್ತರು ಜಗನ್ಮಾತೆಯನ್ನು ಪೂಜಿಸುತ್ತಾರೆ.

ಚತುಷ್ಷಷ್ಟಿ ಕಲಾಮಯೀ – 64 ಕಲೆಗಳಿಗೂ ಪ್ರಾಣ ರೂಪಿಣಿಯಾದ ಕಲಾಮಯೀ.

ಮಹಾಚತುಷ್ಷಷ್ಟಿಕೋಟಿ ಯೋಗಿನೀ ಗಣಸೇವಿತಾ – 64 ಕೋಟಿ ಸೇವೆಯನ್ನು ಸ್ವೀಕರಿಸುವ ಶ್ರೀಮಾತೆ.

*************************************

ಮನುವಿದ್ಯಾ ಚಂದ್ರವಿದ್ಯಾ ಚಂದ್ರಮಂಡಲ ಮಧ್ಯಗಾ I

ಚಾರುರೂಪಾ ಚಾರುಹಾಸಾ II59II

ಮನುವಿದ್ಯಾ ಚಂದ್ರವಿದ್ಯಾ – ಮನು & ಚಂದ್ರರು ಶ್ರೀಮಾತೆ ಉಪಾಸನೆ ಮಾಡಿದವರಲ್ಲಿ ಪ್ರಮುಖರು.

ಚಂದ್ರಮಂಡಲ ಮಧ್ಯಗಾ –ಶ್ರೀ ಚಕ್ರವೇ ಚಂದ್ರಮಂಡಲದ ಕುಂಡಲದಲ್ಲಿರುವ ಶ್ರೀಮಾತೆ.

ಚಾರುರೂಪಾ ಚಾರುಹಾಸಾ – ಸಹಸ್ರಾರದ ಚಂದ್ರಮಂಡಲದಲ್ಲಿರುವ ಮುಗುಳ್ನಗೆಯುಳ್ಳಚಾರು ಹಾಸ.

ಚಾರುಚಂದ್ರ ಕಲಾಧರಾ – ಸುಂದರವಾದ ಚಂದ್ರ ಕಲೆಯನ್ನು ತಲೆಯಮೇಲೆ ಧರಿಸಿರುವ ಚಾರುಚಂದ್ರ ಕಲಾಧರಾ.

*************************************

ಚರಾಚರ ಜಗನ್ನಾಥಾ ಚಕ್ರರಾಜನಿಕೇತನಾ I

ಪಾರ್ವತೀ ಪದ್ಮನಯನಾ ಪದ್ಮರಾಗಸಮಪ್ರಭಾ II60II

Exercise Files
No Attachment Found
No Attachment Found
Lesson List
ಶ್ರೀ ಲಲಿತಾ ಸಹಸ್ರನಾಮ
0/1
0% Complete