ನಾಗೇಂದ್ರ ಅಪ್ಪಾಜಿ

ಗುರುಗಳು

ಗುರುಗಳಜೀವನ ಚರಿತ್ರೆ

ಶ್ರೀಮಾತಾ ಸುಪುತ್ರಾಯ ವಿದ್ಮಹೇ ವಿರಜಾನಂದಶಿಷ್ಯಾಯ ಧೀಮಹಿ|
ತನ್ನೋ ನಾಗೇಂದ್ರಃ ಪ್ರಚೋದಯಾತ್||

ಹಾಸನ ಜಿಲ್ಲೆ ಹೊಳೆನರಸೀಪುರ ಹತ್ತಿರ ಹರಿಹರಪುರದಲ್ಲಿ 18.02.1960.ಯಲ್ಲಿ ನಾಗೇಂದ್ರಕುಮಾರ್ ಅಂದರೆ ಗುರುಗಳು ಜನನವಾಗಿದ್ದು.ಕಾಕತಾಳಿಯಕವಾಗಿ ರಾಮಕೃಷ್ಣ ಪರಮಹಂಸರು ಸಹ ಡೇಟ್ ಪ್ರಕಾರ 18 ಫೆಬ್ರವರಿ ಜನನವಾದರಿಂದ ಅದನ್ನ ಒತ್ತಿ ಹೆಳಲು ಇಷ್ಟಪ ಪಡುತ್ತಿದರು. ಬಾಲ್ಯದಲ್ಲಿ ಅವರಿಗೆ ಅಧ್ಯಾತ್ಮಿಕ ವಿಷಯದಲ್ಲಿ ಅಷ್ಟಾಗಿ ಆಸಕ್ತಿ ಇರಲಲ್ಲಿವಂತೆ ಆದರೆ ಓದಿನಲ್ಲಿ ಮತ್ತು ಇತರ ಚಟುವಟಿಕೆಗಳಲ್ಲಿ ಬಹಳಷ್ಟು ಮುಂದೆ ಇದ್ದರಂತೆ. ಶಾಲೆಯ ವಿದ್ಯಾಭ್ಯಾಸ ಮುಗಿದ ನಂತರ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ(B.com) ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಎಂಕಾಂ(M.com) ಓದುತ್ತಿದ್ದಾಗ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿ ಹುದ್ದೆಗೆ ಸೇರುತ್ತಾರೆ .

ಅವರಿಗೆ 25ನೇ ವರುಷಕ್ಕೆ ಭಾಗ್ಯಮ್ಮ ಎನ್ನುವವರ ಜೊತೆ ವಿವಾಹವಾಗಿತ್ತು. ಒಂದು ಗಂಡು ಒಂದು ಹೆಣ್ಣು ಮಕ್ಕಳಿಗೆ ತಂದೆಯಾಗುತ್ತಾರೆ.ಅವರು ಪ್ರತಿದಿನ ಸಂಧ್ಯಾವಂದನೆ ಮತ್ತು ಹಬ್ಬಗಳಲ್ಲಿ ವಿಶೇಷ ಪೂಜೆ ಮಾಡುತ್ತಿದ್ದರಂತೆ ಆದರೆ ಆಧ್ಯಾತ್ಮಿಕ ವಿಚಾರದಲ್ಲಿ ಯಾವ ಬೆಳವಣಿಗೆ ಇರಲಿಲ್ಲವಂತೆ. ಗುರುಗಳಿಗೆ ಪತ್ನಿ ಭಾಗ್ಯಮ್ಮ ಬಗ್ಗೆ ಒಲವು ಗೌರವ ಇದ್ದಿದ್ದರಿಂದ ಅವರನ್ನು ಸಹಧರ್ಮಿಣಿ ಎಂದೇ ಪ್ರಸ್ತಾಪಿಸುತ್ತಿದ್ದರು. ಭಾಗ್ಯಮ್ಮ ನವರ ಭಕ್ತಿ ಮಾರ್ಗದಲ್ಲಿ ವಿಶೇಷವಾಗಿ ಒಲವನ್ನು ಹೊಂದಿದ್ದರಂತೆ.

18 ವರ್ಷಗಳ ಹಿಂದೆ ಗುರುಗಳನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮ್ಯಾನೇಜರ್ ಆಗಿ ವರ್ಗಾಯುಸುತ್ತಾರೆ. ಅಲ್ಲಿನ ವ್ಯವಹಾರ ವಹಿವಾಟುಗಳು ಮಾರ್ಚ್ ತಿಂಗಳಲ್ಲಷ್ಟು ತಳ ಸೇರುತ್ತೆ ಆದರೆ ಕಾರಣ ಗೊತ್ತಾಗಲಿಲ್ಲವಂತೆ. ಇದೆಲ್ಲಾ ನೋಡಿದ ಚೇರ್ಮನ್ ಗೆ ಬಹಳ ಸಿಟ್ಟು ಬರುತಂತೆ. ಯಾರು ಸರಿಯಾಗಿ ಕೆಲಸ ಮಾಡು ತ್ತಿಲ್ಲಾ. ಇವರಿಗೆ ಶಿಕ್ಷೆ ಆಗಬೇಕೆಂದು ಹೂಗ್ಯಾಂ ಎನ್ನು ಜಾಗಕ್ಕೆ ಇವರನ್ನು ವರ್ಗಾಯಿಸುತ್ತಾರಂತೆ. ಇವರು ಚೆನ್ನರಾಯಪಟ್ಟಣಕ್ಕೆ ಬಂದು ಇನ್ನು 11 ತಿಂಗಳು ಮಾತ್ರ ಆಗಿರುತ್ತೆ.

ಹೂಗ್ಯಾಂ ಊರು ಕರ್ನಾಟಕದ ಕೊನೆಯಭಾಗ ಮತ್ತು ತಮಿಳು ನಾಡಿನ ಪಕ್ಕ ಇದೆ.

ಈ ಊರು ದಟ್ಟವಾದ ಅರಣ್ಯದ ಮಧ್ಯೆಯಲ್ಲಿ ಇತ್ತಂತೆ. ಒಂದು ಕಡೆ ಪಾಲರ್ ನದಿ ಇನ್ನೊಂದು ಕಡೆ ಬೆಟ್ಟಗಳು. ಅಲ್ಲಿಂದ 3KM ಹೋದರೆ 2 ಬೆಟ್ಟಗಳ ನಡುವೆ ಕಟ್ಟಿದಂತಹ ಮೀಣ್ಯಂ dam. ಮಧ್ಯದಲ್ಲಿ ಸಣ್ಣ ಸಣ್ಣ ತಮಿಳರ ಮನೆಗಳು,ತಾರಸಿಯಲ್ಲಿ (RCC ಕಟ್ಟಡ) ಕಟ್ಟಿರುವ ಒಂದು ಸಣ್ಣ ಮನೆಯೇ ಕಾವೇರಿ ಗ್ರಾಮೀಣ ಬ್ಯಾಂಕ್ ಆಗಿತ್ತು ಇದರ ಜೊತೆ ಸುತ್ತ ಮುತ್ತಲಿನ ಜಾಗವೆಲ್ಲಾ ಗಂಧದ ಕಳ್ಳ ವೀರಪ್ಪನ್ನನ ಚಟುವಟಿಕೆಯ ಜಾಗವಾಗಿತ್ತಂತೆ. ಈ ಕಾರಣಕ್ಕಾಗಿ ಸ್ಪೆಷಲ್ ಟಾಸ್ಕ್ ಫೋರ್ಸ್. ಪೋಲಿಸ್ ಪಡೆಯವರು ಎಲ್ಲಾ ಸಂಪರ್ಕಗಳನ್ನು ತೆಗೆದು ಹಾಕಿದ್ದರಂತೆ. ಆಗ ವೀರಪ್ಪನ್ನ ಬೇಟೆ ಕಾರ್ಯ ತುಂಬಾ ಚುರುಕಾಗಿ ನಡೆಯುತ್ತಿತ್ತಂತೆ.

ಅಲ್ಲಿ ತಮಿಳು ಮಾತನಾಡುವ ಕೆಲವೆ ಜನರು ವಾಸವಾಗಿದ್ದರಂತೆ. ರಾತ್ರಿಯ ನಿರವತೆಯ ವಾತಾವರಣದಲ್ಲಿ ಪೊಲೀಸ್ ಜೀಪ್ ಶಬ್ದ ಜೊತೆಗೆ ಕಾಡಿನ ಮೃಗಗಳ ಶಬ್ದ ಆಗಾಗ ಕೇಳಿಸುತ್ತಿತ್ತಂತೆ. ಒಟ್ಟಿನಲ್ಲಿ ಭಯ ಹುಟ್ಟಿಸುವಂತಹ ವಾತಾವರಣ ವಾಗಿತ್ತು ಆ ಪ್ರದೇಶ. ಇವರು ಬ್ಯಾಂಕ್ ಕಟ್ಟಡದಲ್ಲೇ ವಾಸವಾಗಿದ್ದರು ಮತ್ತು ಊಟ ತಿಂಡಿ ಎಲ್ಲಾ ಕರ್ಪುಸ್ವಾಮಿ ಎನ್ನುವ ತಮಿಳರು ಕೊಡುತ್ತಿದ್ದರಂತೆ. ಪ್ರತಿ ಶನಿವಾರ ಊರಿಗೆ ಹೋಗಿ ಮತ್ತೆ ಸೋಮವಾರ ಕೆಲಸಕ್ಕೆ ಬರುತ್ತಿದ್ದರಂತೆ. ದಿನಕ್ಕೆ ಒಂದೇ ಬಸ್ಸು ಆ ಊರಿಗೆ ಬರುತ್ತಿತ್ತಂತೆ. ಒಂದು ಸಲ ಮನೆಗೆ ಹೋದಾಗ, ಅವರ ಅಜ್ಜಿ ಹೋದ ವಿಷಯ ತಿಳಿಸಿ ಮುಂದೆ ಯಾರಿಗೆ ಏನಾದರು ಆದರೆ ನಿಮಗೆ ಹೇಗೆ ತಿಳಿಸೊದು ಅಂತಹ ಜಾಗದಲ್ಲಿ ಇದ್ದೀರಾ ಎಂದು ಭಾಗ್ಯಮ್ಮ ನವರು ಬೇಜಾರು ಪಟ್ಟರಂತೆ.

ಬ್ಯಾಂಕಿಗೆ ಯಾರು ಬರ್ತಾಇರಿ್ೢಲ್ವವಂತೆ ,ಯಾವತ್ತಾದರೂ ಒಬ್ಬರು ಇಬ್ಬರು old age pensionತೆಗೆದು ಕೊಳ್ಳಿವುದಕ್ಕೆ ಬರುತ್ತಿದ್ದರಂತೆ. ರಾತ್ರಿ ಹೊತ್ತು ಆ ನಿರ್ಜನ ಪ್ರದೇಶದಲ್ಲಿ ಅವರಿಗೆ ನಿದ್ರೆ ಬರುತ್ತಿರಲಿಲ್ಲವಂತೆ.ಇದನ್ನು ನಿವಾರಿಸಲು 2 ದಾರಿ ಇತ್ತಂತೆ.

ಒಂದು ಮದ್ಯಪಾನ ಮಾಡೊದು ಅಥವಾ ಇನ್ನೊಂದು ಭಗವಂತನ ಕಡೆಗೆ ಹೋಗೋದು. ದೈವ ಇಚ್ಚೆಯಿಂದ ಗುರುಗಳು 2ನೇಯದು ಆಯ್ಕೆ ಮಾಡಿ ಕೊಂಡರು. ಅವರಿಗೆ ಗಾಯತ್ರಿ ಮಂತ್ರ ಬಿಟ್ಟರೆ ಬೇರೆ ಮಂತ್ರ ಗಳು ಬರುತ್ತಿರಲಿಲ್ಲ ಮತ್ತು ಯಾವ ಗುರುಗಳಿಂದಲು ಮಂತ್ರೋಪದೇಶ ಆಗಿರಲಿಲ್ಲ. ಅದನ್ನೆ ಬೆಳಿಗ್ಗೆ ಸಂಜೆ ದಿನ 7.00 ರಿಂದ 8:00 ಗಂಟೆಗಳ ಕಾಲ ಜಪ ಮಾಡುತ್ತಿದ್ದರಂತೆ. ಸಂಜೆ 4:00 ಗಂಟೆಗೆ ಕ್ಯಾಷಿಯರ್ ಜೊತೆ ಸುತ್ತಾಡಿ. DAM ಲ್ಲಿ ಗಂಟೆಗಂಟ್ಟಲೆ ಪ್ರಕೃತಿಯನ್ನು ನೋಡುತ್ತಾ ವಾಪಸ್ ಬರುತ್ತಿದ್ದರಂತೆ. ಹೀಗೆ ಅವರು ಸಾಧನೆ ಮಾಡಿ ಗಾಯತ್ರಿ ಮಂತ್ರವನ್ನು ಸಿದ್ಧಿಸಿಕೊಂಡು,ಅದರ ಶಕ್ತಿಯಿಂದ ಜಪ ಮಾಡುತ್ತಿರುವಾಗ ½ ಅಡಿ ನೆಲದಿಂದ ಮೇಲೆ ಗಾಳಿಯಲ್ಲಿಇರುತ್ತಿದ್ದರಂತೆ.

ಒಂದು ಸಲ ಕ್ಯಾಷಿಯರ್ ಸಹ ನೋಡಿದ್ದರಂತೆ. ಆಮೇಲೆ ಗುರುಗಳು ಯಾರಿಗೂ ಹೇಳಬೇಡಿ ಅಂದರಂತೆ.

ಎರಡು ವರ್ಷಕ್ಕೆ ಮೈಸೂರಿನ ಹತ್ತಿರಕ್ಕೆ ವರ್ಗಾವಣೆ ಆಗುತ್ತೆ.

ಬಂದ 15 ದಿವಸಕ್ಕೆ ಅವರ ಮಾವನವರು ತೀರಿಕೊಂಡರಂತೆ. ಈಗಾಗಲೇ ಜಪ ಧ್ಯಾನ ಮಾಡಿ ಪ್ರಕೃತಿಯ ರುದ್ರ ರೂಪ ನೋಡಿ ಜೀವನ ಇಷ್ಟೇನಾ ಅನ್ನಿಸಿತ್ತಂತೆ.ಮತ್ತೆ ಒಂದು ತಿಂಗಳಿಗೆ ಅವರ ತಂದೆಯ ತೀರಿಕೊಂಡಾಗ, ಅವರಿಗೆ ಪೂರ್ಣಅರಿವಾಯಿತಂತೆ ಜೀವನ

ನಶ್ವರ ಭಗವಂತನ ಕಡೆಗೆ ಹೋಗುವ ಮಾರ್ಗವೆ ಸರಿ ಎಂದು. ಇದಕ್ಕೆ ಪೂರಕವಾಗಿ ದೈವವು ಅವರಿಗೆ ಮಾರ್ಗವನ್ನು ತೋರಿಸುತ್ತಾಳೆ.

ಗುರುಗಳ ತಂದೆಯ ಕಾರ್ಯಗಳಿಗೆ ಹೊಳೆ ನರಸೀಪುರಕ್ಕೆ ಹೋದಾಗ, ಅಲ್ಲಿಗೆ ಪರಮ ಪೂಜ್ಯ ಸ್ವಾಮಿ ವಿರಜಾನಂದ ಸರಸ್ವತಿ ಮಹಾರಾಜರು ಚಾತುರ್ಮಾಸಕ್ಕೆ ಬಂದಿರುತ್ತಾರೆ. ಗುರುಗಳ ತಮ್ಮ ಅವರನ್ನು ಭೇಟಿ ಮಾಡಿಸುತ್ತಾರೆ. ಇವರ ವೃತ್ತಾಂತವೆಲ್ಲವನ್ನು ಕೇಳಿದ ಸ್ವಾಮಿ ವಿರಜಾನಂದ ಸರಸ್ವತಿ ಮಹಾರಾಜರು, ನಾಗೇಂದ್ರ ಗುರುಗಳನ್ನು ಮತ್ತು ಭಾಗ್ಯಮ್ಮನವರನ್ನು ಮಾರನೇ ದಿನ ಬರಲು ಹೇಳುತ್ತಾರೆ. ಮಂತ್ರೋಪದೇಶ ಮಾಡುವುದಕ್ಕೆ.

ಮಾರನೆ ದಿನ ಇವರು ಹೋದಾಗ ಸ್ವಾಮಿಗಳು “ ಓಂ ಹ್ರೀಂ ಪರಾ ಶಕ್ತ್ಯೈ ನಮಃ ”, “ ಶ್ರೀ ಲಲಿತಾ ಸಹಸ್ರನಾಮದ ” ಉಪದೇಶವನ್ನು ಮಾಡಿ, ಇದನ್ನು ಮುಂದುವರೆಸಿಕೊಂಡು ಹೋಗಲು ಹೇಳುತ್ತಾರೆ.

ಇವರಿಗೆ ಗುರುವಿನ ಸೆಳತ ಎಷ್ಟು ಇತ್ತಂದರೆ ಕ್ಷಣವು ಬಿಟ್ಟು ಇರಲಾರೆ ಎಂದು ಅನ್ನಿಸುತ್ತಿತ್ತಂತೆ. ಹೊಳೆನರಸಿಪುರ ಬಿಟ್ಟ ಮೇಲೆ ಗುರುಗಳಿಗೋಸ್ಕರ, ರಾಮನಗರ ಕನಕಪುರ ಮದ್ಯೆದಲ್ಲಿ ಬರುವ ದೊಡ್ಡ ಮುದವಾಡಿಯಲ್ಲಿ ಇದ್ದ ದತ್ತ ಸದಾನಂದ ಶ್ರಮಕ್ಕೆ ಹೋಗಿ ಶನಿವಾರ ಭಾನುವಾರ ಮತ್ತು ರಜಾದಿನಗಳನ್ನು ಕಳೆಯುತ್ತಿದ್ದರಂತೆ.

ಸ್ವಾಮೀಜಿಗಳು ಆಧ್ಯಾತ್ಮಕ ಮಾರ್ಗದರ್ಶನ ಹೆಜ್ಜೆಹೆಜ್ಜೆಗು ನೀಡಿದರಂತೆ.

ಭಗವಂತನ ಪಥದಲ್ಲಿ ಹೇಗೆ ನಡ್ಕೊಬೇಕು ಎಂಬುದು ವಿಶೇಷವಾಗಿ ಗಮನ ಕೊಟ್ಟು ಹೇಳುತ್ತಿದ್ದರಂತೆ. ಚಿತ್ತದಲ್ಲಿ ಭಗವಂತನನ್ನು ಕೂರಿಸೋದು ಹೇಗೆ,ಆಧ್ಯಾತ್ಮಕ ವಿಷಯದ ಬಗ್ಗೆ ಮಾತನಾಡುವುದು ಹೇಗೆಂದು, ಭಗವಂತನನ್ನು ಪ್ರೀತಿಯಿಂದ ಒಲಿಸಿಕೊಳ್ಳೋದು ಹೇಗೆ .ಭಗವಂತ ಬೇರೆ ಎಲ್ಲೋ ಇಲ್ಲ ನಮ್ಮಲ್ಲೆ ಇರುತ್ತಾನೆಂದು ತಿಳಿದು ಪೂಜೆ ಮಾಡಬೇಕು ಎಂದು ಪ್ರಜ್ಞಾಸ್ಥಿತಿಯನ್ನು ಹೀಗೆ ಮೇಲಕ್ಕೆ ತೆಗೆದುಕೊಂಡು ಹೋಗಬೇಕು, ಮುಂತಾದವನ್ನೆಲ್ಲಾ ಹೇಳುತ್ತಿದ್ದರಂತೆ. ಎಷ್ಟೊ ಜನ್ಮಗಳ ಪುಣ್ಯದಿಂದ ಅಂತಹ ಗುರುಗಳನ್ನು ಪಡೆದೆ ಎಂದು ನೆನೆಸುತ್ತಿರುತ್ತಾರೆ.

ಒಂದು ದಿನ ನಾಗೇಂದ್ರ ಗುರುಗಳನ್ನು ಕರೆದು ಸ್ನಾನಮಾಡಿ ಒದ್ದೆ ಬಟ್ಟೆಯಲ್ಲಿ ದತ್ತಾತ್ರೇಯರ ಮುಂದೆ ಕೂರಲು ಹೇಳಿ ಅವರು ಬಂದು

ಅಲ್ಲೇ ಕುಳಿತು ಉಗುರಿನಿಂದ ಹಣೆಗೆ ಅಂದರೆ ಆಜ್ಞಾಚಕ್ರಕ್ಕೆ ತಿವಿಯುತ್ತಾ, ಮಂತ್ರ ಹೇಳುತ್ತಾ ಅವರನ್ನೇ ದಿಟ್ಟಿಸಿ ನೋಡುತ್ತಿದ್ದರಂತೆ. ಇದೇ ತರಹ 5 ನಿಮಿಷ ಮಾಡಿ ಆಜ್ಞಾಚಕ್ರ ವನ್ನು Activate ಮಾಡಿದರಂತೆ, ಆದರಿಂದ ಎಲ್ಲವೂ ಬ್ರಹ್ಮಮಯವಾಗಿ ಕಾಣಿಸಲು ಶುರು ಆಯಿತಂತೆ.

ಇದೆ ಸ್ಥಿತಿಯಲ್ಲೇ ಅವರು ದೈನಂದಿನ ಕಾರ್ಯಗಳು ಯತಾಪ್ರಕಾರ ನಡೆಸುತ್ತಿದ್ದರಂತೆ.ಇದೇ ತರಹ 6 ತಿಂಗಳು ಕಾಲ ಅನುಭವಿಸಿದರಂತೆ.

ಅಂತಹ ಸಮಯದಲ್ಲಿ ಮೈಸೂರಿನಲ್ಲಿ ವಾಸವಾಗಿದ್ದ ಅವರು ಬೆಳಗಿನ ಜಾವ 2:00 ಗಂಟೆಯಲ್ಲಿ .ಕಾರಂಜಿಕೆರೆ ಹಿಂಭಾಗದ ರೋಡಲ್ಲಿ ದಟ್ಟವಾದ ಕಾರ್ಗತ್ತಲಲ್ಲಿ ಹೋಗಿ. ಅಮ್ಮ ದರುಶನ ಕೊಡೆ ಎಂದು ಕೂಗಿ ಕೂಗಿ ಅಳುತ್ತಾ ಇದ್ದರಂತೆ. ಕಣ್ಣೀರಿನಿಂದ ಬಟ್ಟೆಯೆಲ್ಲಾ ತೋಯ್ದು ಹೋಗುತ್ತಿತ್ತಂತೆ. ಮತ್ತೆ 5ಗಂಟೆಗೆ ಮನೆಗೆ ಬರುತ್ತಿದ್ದರಂತೆ.

ಒಂದು ದಿನ ಹೀಗೆ ಅವರು ಅತ್ತು ಅತ್ತು ಸುಸ್ತಾಗಿ ಭಾ ವೊದ್ವೇಗದಿಂದ ಬಂಡೆಗೆ ತಲೆ ಚಚ್ಚಿಕೊಂಡು, ತಾಯಿ ಬರುತ್ತಾಳೆ ದರುಶನ ಕೊಡುತ್ತಾಳೆ ಎಂದಿರಿ. ಎಲ್ಲಿ ಸ್ವಾಮೀಜಿ ಎಷ್ಟು ಕೂಗಿದರು ಬರುತ್ತಿಲ್ಲಾ ಎಂದು ಹೇಳುತ್ತಾ ಹೊರಳಾಡಿದರಂತೆ. ಆಗ ಭದ್ರಾವತಿಯಲ್ಲಿ ಇದ್ದ ವಿರಜಾನಂದ ಸರಸ್ವತಿ ಯವರು ಪ್ರತ್ಯಕ್ಷವಾಗಿ, ನಾಗೇಂದ್ರ ಆದೇವಿ ಒಲಿದಿದ್ದಾಳೆ. ಆ ಪ್ರೇಮ ವನ್ನು ನಿನ್ನ ಮನಸ್ಸಿನ ಅಣು ಅಣು ವಿನಲ್ಲೂ ಹೊರಹೊಮ್ಮಿಸು ಆಗ ನಿನಗೆ ಪೂರ್ಣ ಅನುಭವ ಆಗುತ್ತೆ, ಎಂದು ಹೇಳಿ ಅಂತರ್ದಾನ ವಾಗುತ್ತಾರಂತೆ. ಗುರುಗಳು ಮನೆಗೆ ಬಂದು ತಲೆಗೆ ಸ್ನಾನ ಮಾಡಿ ದೇವರ ಮನೆಗೆ ಹೋಗಿ ಕುಳಿತರಂತೆ. ಆಗ ಪೂರ್ಣವಾಗಿ ಮನವೆಲ್ಲ ಭಗವತಿ ತುಂಬಿದಾಗ ಬಾಹ್ಯದ ಪ್ರಜ್ಞೆ ಹೋಗಿ ಒಳಗಡೆ ಅಂತರಜ್ಯೋತಿ ಬೆಳಗಿ ಆನಂದದಲ್ಲಿ ತಲ್ಲೀನರಾಗಿ ದ್ದರಂತೆ. ಹೀಗೆ ಸುಮಾರು 2 ಗಂಟೆಕಾಲ ಆ ಜಗನ್ಮಾತೆಯಲ್ಲಿ ತಲ್ಲೀನರಾಗಿದ್ದು ಆಮೇಲೆ ದೇವರ ಮನೆಯಿಂದ ಹೊರಗೆ ಬರುತ್ತಾರಂತೆ. ಆಗ ಅವರ ಮುಖದ ತೇಜಸ್ಸುಕಂಡು ಧರ್ಮಪತ್ನಿ ಭಾಗ್ಯಮ್ಮವವರು ಕಾಲಿಗೆ ನಮಸ್ಕಾರ ಮಾಡುತ್ತಾರಂತೆ.

ಗುರುಗಳ ಮೈಸೂರಿನ ಹಿನಕಲ್ ಮನೆ ಮೇಲ್ಗಡೆ ಸ್ವಾಮಿ ವಿರಜಾನಂದ ಮಹಾರಾಜ್ ಗುರುಗಳಿಗಾಗಿ ಆಶ್ರಮ ಕಟ್ಟಿಸುತ್ತಾರೆ.

ಅಲ್ಲಿ ಅವರು 5 ವರ್ಷಗಳ ಕಾಲ ಇದ್ದರಂತೆ. ಇದೆಲ್ಲಾ ಭಗವತಿಯ ಸಂಕಲ್ಪವೇಸರಿ ಏಕೆಂದರೆ ವಿರಜಾನಂದ ಸ್ವಾಮಿಯವರೆ ಹೇಳುತ್ತಿದ್ದರಂತೆ, ನಾನುಏಕೆ ಇಲ್ಲಿ ಬಂದಿದ್ದೀನಿ ನೀನು ಏಕೆ ಇಲ್ಲಿ ಇದ್ದಿಯಾ ಎಂದು. ಅವರ ಪದತಲದಲ್ಲಿ ಭಗವಂತನ ಕಡೆಗೆ ಹೆಜ್ಜೆ ಇಡೂದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಟ್ಟರಂತೆ. ಸ್ವಾಮೀಜಿಯವರು ಮಹಾ ಶಕ್ತಿವಂತರು ಜಗನ್ಮಾತೆಯ

ಶಕ್ತಿಯನ್ನು ಪಡೆದು ಕೊಂಡಿದ್ದರಂತೆ.

ಕಟ್ಟಕಡೆ ದಿನಗಳಲ್ಲಿ ಸ್ವಾಮಿಜಿಯವರು, ನಾಗೇಂದ್ರ ಗುರುಗಳನ್ನು ಮತ್ತು ಭಾಗ್ಯಮ್ಮನವರನ್ನು ಕರೆದು 2 ವಿಚಾರ ಹೇಳಿದರಂತೆ. ನನ್ನ ದೇಹತ್ಯಾಗ ಆಗುತ್ತಿದೆ. ನೀನು ಶ್ರೀ ಕಾಂತಾನಂದ ಸರಸ್ವತಿ ಗುರುಗಳನ್ನು ಗುರುಗಳಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ನಡೆ. ಎರಡನೇದು ನನ್ನ ಪೂರ್ಣ ಆಸ್ತಿ ಅಂದರೆ ಶ್ರೀಚಕ್ರ, “ಓಂ ಹ್ರೀಂ ಪರಾಶಕ್ತಿ ಮಂತ್ರ”, “ಲಲಿತಾ ಸಹಸ್ರನಾಮ” ಮತ್ತು ಅವರ ಸಂಪಾದಿಸಿದ್ದ ಶಕ್ತಿ ಎಲ್ಲವನ್ನು ಧಾರೆ ಎರೆದು ಕೊಟ್ಟರಂತೆ. ಇದಾದ ಮೇಲೆ ಭಗವತಿ ಗುರುಗಳ ಹೃದಯದಲ್ಲಿ ಸ್ಥಿರವಾಗಿ ಕುಳಿತಿದ್ದಾಳೆ. ಈಗಲೂ ಸಹ ಈ ದೇಹದಿಂದ ಎಲ್ಲಾ ಭಗವತಿಯ ಕಾರ್ಯಗಳು ಒಳಗಡೆ ಇರುವ ಸ್ವಾಮೀಜಿಯವರೆ ನಡೆಸುತ್ತಿದ್ದಾರೆ, ನಾನು ನನ್ನದು ಏನು ಇಲ್ಲ. ,ನಾನು ಬರೀ ಶೂನ್ಯ ಎಂದು ನಾಗೇಂದ್ರ ಗುರುಗಳು ಹೇಳುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ.

ವಿರಜಾನಂದ ಸ್ವಾಮೀಜಿಯವರ ಉದ್ದೇಶ ಒಂದು ಇತ್ತಂತೆ. ಭಗವಂತನ ಸಂಬಂದ ಋಷಿ ಮುನಿಗಳಿಗೆ ಮತ್ತು ಸನ್ಯಾಸಿಗಳಿಗೆ ಮಾತ್ರ ಅಲ್ಲ.ಈಗಿನ ಕಾಲದಲ್ಲೂ ಭಕ್ತರಾಗಿ ಗೃಹಸ್ಥರಾಗಿ ಒಳ್ಳೆಕೆಲಸದಲ್ಲಿ ಇದ್ದವರು ಸಹ ಭಗವತ್ಪಧದಲ್ಲಿ ನಡೆಯ ಬಹುದು ಎಂದು ತೋರಿಸಲು. ನಾಗೇಂದ್ರ ಗುರುಗಳನ್ನು ಆಯ್ಕೆ ಮಾಡಿಕೊಂಡು ಅವರ ಮುಖಾಂತರ ಪ್ರಚಾರ ಪಡಿಸುತ್ತಿದ್ದಾರೆ.

“ ಓಂ ಶಾಂತಿ ಶಾಂತಿ ಶಾಂತಿಃ

“ಸರ್ವಂ ಶ್ರೀ ಗುರುಚರಣಾರ್ಪಣ ಮಸ್ತು”.